ಕೊಪ್ಪಳ:ರಾಜ್ಯದ ಸಿಎಂ.ಬಸವರಾಜ್ ಬೊಮ್ಮಾಯಿ ತರಾತುರಿಯಲ್ಲಿಯೇ ಮೋದಿಯನ್ನ ಭೇಟಿ ಆಗಿದ್ದು ಯಾಕೆ.? ಇದನ್ನ ಜನರಿಗೆ ಸ್ಪಷ್ಟ ಪಡಿಸಬೇಕು ಅಂತಲೇ ಎಚ್.ಕೆ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಮೋದಿಯನ್ನ ಭೇಟಿ ಆಗಿರೋದು ನೋಡಿದ್ರೆ,ಬಿಜೆಪಿಯಲ್ಲಿ ಏನೋ ಗೊಂದಲ ಇದೆ. ಈಗಿನ ಬೆಳವಣಿಗೆ ಕಂಡ್ರೆ ರಾಜಕೀಯ ಗೊಂದಲ ಸೃಷ್ಟಿಯಾಗಿದೆ. ಕರ್ನಾಟಕದ ಜನರಿಗೆ ಅಲ್ಲಿ ಏನು ಚರ್ಚೆ ಆಗಿದೆ ಅಂತಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರೂ ಕೇಳಿ ಬರುತ್ತಿದೆ ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಕೆ.ಪಾಟೀಲರು, ತನಿಖೆ ಮಾಡಿದರೇ ಎಲ್ಲವೂ ತಿಳಿಯುತ್ತದೆ ಎಂದು ರಿಯಾಕ್ಟ್ ಮಾಡಿದ್ದಾರೆ.
PublicNext
11/11/2021 02:52 pm