ಮೈಸೂರು:ಬಿಟ್ ಕಾಯಿನ್ ಕೇಸ್ನಲ್ಲಿ ಸಿಎಂ ತಲೆದಂಡ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರಿಯಾಂಕ್ ಹೇಳಿಕೆಗೆ ಸಚಿವ ಸೋಮಶೇಖರ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.ಪ್ರಕರಣ ಸಂಬಂಧ ಕಾನೂನು ಕ್ರಮಕ್ಕೂ ಮುಂದಾಗಿದ್ದು ತನಿಖೆ ಬಳಿಕ ಸತ್ಯಾಂಶ ಹೊರಬರುತ್ತೆ.
ಪ್ರಿಯಾಂಕ್ ಖರ್ಗೆಗೆ ಸಿಎಂ ಬದಲಾವಣೆ ಆಗ್ತಾರೆಂದು ಕನಸು ಬಿದ್ದಿತ್ತಾ? ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ.
ಬೊಮ್ಮಾಯಿಯವರೇ ಪೂರ್ಣ ಅವಧಿಯನ್ನ ಸಿಎಂ ಆಗಿರುತ್ತಾರೆ.
ಈ ಬಗ್ಗೆ ಮಾತನಾಡುವಷ್ಟು ಪ್ರಿಯಾಂಕ್ ಬೆಳೆದಿಲ್ಲ.ಅವರಪ್ಪ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರು.ಇವನೊಬ್ಬ ಜೂನಿಯರ್ಗೆ ಜೂನಿಯರ್.ಇವನ ಹೇಳಿಕೆಗೆ ಪ್ರತಿಕ್ರಿಯೆ ನೀಡೋಕೆ ಹೋಗಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.
PublicNext
10/11/2021 06:17 pm