ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನೂ ದಲಿತನೇ, ದಲಿತರು ಸಿಎಂ ಆದ್ರೆ ತಕರಾರು ಇಲ್ಲ: ಸಿದ್ದರಾಮಯ್ಯ

ಮೈಸೂರು: ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ. ನಾನು

ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ. ದಲಿತರು ಸಿಎಂ ಆದ್ರೆ ನನ್ನದು ಏನು ತಕರಾರು ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಹಿನಕಲ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ದಲಿತರು ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಪಕ್ಷಗಳಲ್ಲಿ ಈ ಅವಕಾಶ ಇಲ್ಲ. ರಾಜ್ಯದಲ್ಲೂ ಹೈಕಮಾಂಡ್ ದಲಿತರನ್ನೇ ಮುಖ್ಯಮಂತ್ರಿಯಾಗಿ ಪರಿಗಣಿಸಿದರೆ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದರು.

ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುಧಾನ ಮೀಸಲಿಟ್ಟಿದ್ದೆ. ಸಿಎಂ ಆದ ಒಂದು ಗಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ ಎಂದರು.

Edited By : Nagesh Gaonkar
PublicNext

PublicNext

09/11/2021 07:48 pm

Cinque Terre

163.33 K

Cinque Terre

17

ಸಂಬಂಧಿತ ಸುದ್ದಿ