ಗದಗ: ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಮೇಕೆದಾಟು ಕಲ್ಪನೆ 1996 ರಿಂದಲೂ ಇದೆ. ಕರ್ನಾಟಕ ಪಾವರ್ ಕಾರ್ಪೊರೇಟ್ ಅವರು ಆಗಲೆ ಡಿಪಿಆರ್ ಮಾಡಿದ್ದರು. 2012 ರಲ್ಲಿ ಮಾರ್ಪಾಡು ಮಾಡಿ ಯಾವರೀತಿ ಮಾಡಬೇಕು ಅಂತಾ ತೀರ್ಮಾನ ಆಗಿತ್ತು.
ಅದನ್ನು ರದ್ದುಗೊಳಿಸಿ 4,5 ವರ್ಷ ಬರೀ ಡಿಪಿಆರ್ ನಲ್ಲೇ ಕಾಲ ಕಳೆದಿದ್ದಾರೆ. ಈ ಕಾಮಗಾರಿ ಮಾಡಲು ನಾವು ಬದ್ಧರಿದ್ದೇವೆ ಎಂದರು.
ಏನು ಮಾಡಬಹುದು ಎನ್ನುವ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಿದ್ದೇವೆ. ಕಾವೇರಿ ನ್ಯಾಯ ಮಂಡಳಿಯಲ್ಲಿಯೂ ಪ್ರತಿಪಾದನೆ ಮಾಡಲಾಗಿದೆ.ಸಿಡ್ಲ್ಯೂಸಿ ಮುಖಾಂತರ ಆದೇಶ ಬರುತ್ತೆ. ಮುಂದಿನ ಕ್ರಮಗಳನ್ನ ಸರ್ಕಾರ ಕೈಗೊಳ್ಳಲಿದೆ. ಅದಷ್ಟು ಬೇಗ ಕ್ಲೀಯರ್ ಮಾಡಿಕೊಂಡು ನಾವು ಕೆಲಸ ಮಾಡ್ತೇವೆ ಎಂದರು.
PublicNext
09/11/2021 06:49 pm