ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕಾಂಗ್ರೆಸ್ ವಿರುದ್ಧ ಬಂಡಾಯದ ನೆಲದಲ್ಲಿ ಗುಡುಗಿದ ಕೌರವ

ಗದಗ: ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣ ಮಾಡಿದೆ ದೊಡ್ಡ ಸಾಧನೆ. ಆರ್ಥಿಕ ಮುಗ್ಗಟ್ಟು ನಡುವೆಯು ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಜನ ಸ್ವರಾಜ್ ಯಾತ್ರೆ ಪಕ್ಷ ಸಂಘಟನೆಗಾಗಿ ಜಿಪಂ ಹಾಗೂ ತಾಪಂ ಚುನಾವಣೆ ಸಿದ್ದತೆಗಾಗಿ. ಜನ ಸ್ವರಾಜ್ ಯಾತ್ರೆ ಕಾಂಗ್ರೇಸ್ ನವರ ಕೇಳಿ ಮಾಡಬೇಕಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಜನ್ ಸ್ವರಾಜ್ಯ ಯಾತ್ರೆಗೆ ಕಾಂಗ್ರೆಸ್ ಆಕ್ಷೇಪ ಕುರಿತು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಪುರುಷಾರ್ಥಕ್ಕೂ ಅಲ್ಲ..ಕಾಂಗ್ರೆಸ್ ನವರಿಗೆ ಉತ್ತರ ಕೊಡೋಕೆ ಸ್ವರಾಜ್ ಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ನವರಿಗೆ ಮತ ಪೆಟ್ಟಿಗೆ ಮೂಲಕ ಉತ್ತರ ಕೊಡುತ್ತಿವೇ ಎಂದರು.

ಮೇಕೆದಾಟು ಯೋಜನೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಸಿಎಂ ಉತ್ತರ ನೀಡಿದ್ದಾರೆ. ಕೋರ್ಟ್‌ ನಲ್ಲಿ ಸ್ಪಷ್ಟೀಕರಣ ಬರಬೇಕಿದೆ. ಕ್ಲಿಯರೆನ್ಸ್ ಬಂದರೆ ನಾವೇ ಮಾಡುತ್ತೇವೆ. ಕಾಂಗ್ರೆಸ್ ನವರ ಕೇಳಿ ನಾವು ಮಾಡಬೇಕಿಲ್ಲ. ಬಿಜೆಪಿ ಯವರು ಬೇಗ ಕೆಲಸ ಮಾಡತ್ತಾರೆ ಎಂದು ಕಾಂಗ್ರೆಸ್ ನವರಿಗೆ ವಾಸನೆ ಬಡೆದಿದೆ. ಬಿಜೆಪಿಯವರಿಗೆ ಕ್ರೆಡಿಟ್ ಹೋಗುತ್ತದೆ ಎಂಬ ಕಾರಣಕ್ಕೆ ತೋರ್ಪಡೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಿಲ್ಲ. ಅವಾಗ ಬಾಯಿ ಮುಚ್ಚಿಕೊಂಡು ಕುಳಿತು ಇವಾಗ ಯಾಕೇ ಮಾತಾಡುತ್ತಿದ್ದರೀ..? ರಾಜಕೀಯವಾಗಿ ಲಾಭ ಪಡೆಯೋಕೆ ಹೋಗುತ್ತಾರೆ ಅದು ಸಾಧ್ಯವಿಲ್ಲ.ಮೇಕೆದಾಟು ಯೋಜನೆ ಜಾರಿಗೆ ಮಾಡಲು ಸಿದ್ದವಿದೆ ಬದ್ದವಾಗಿದ್ದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ್ ಜಾರಕೀ ಹೊಳೆ ಸಚಿವ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೇರೆ ಬೇರೆ ಕುತಂತ್ರದಿಂದ ಸಿಗಿಸಿ ಹಾಕಿದ್ದರು. ನೈತಿಕತೆಯಿಂದ ರಾಜೀನಾಮೆ ಕೊಡಬೇಕಾಯಿತು. ಮುಂದಿನದಿನಗಳಲ್ಲಿ ಅವರಿಗೆ ಒಳ್ಳೆಯ ದಿನಗಳು ಬರುತ್ತವೇ ಎಂದರು.

Edited By : Manjunath H D
PublicNext

PublicNext

09/11/2021 04:02 pm

Cinque Terre

43.83 K

Cinque Terre

1

ಸಂಬಂಧಿತ ಸುದ್ದಿ