ಮಂಗಳೂರು:ವೀರ್ ಸಾವರ್ಕರ್ ಬಿಜೆಪಿಯವರಲ್ಲ. ಅವರು ಬಹಳಷ್ಟು ದೊಡ್ಡದಾದ ಸ್ವಾತಂತ್ರ್ಯ ಯೋಧ. ಇಂತಹ ವ್ಯಕ್ತಿಯ ಸ್ಮಾರಕವನ್ನು ಕಟ್ಟಲು ಮುಂದೆ ಬರುವಾಗ ವಿರೋಧಿಸುವವರು ದೇಶದ ವ್ಯವಸ್ಥೆಯನ್ನು ವಿರೋಧಿಸುವವರು ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಅವರು, ಜನರು ಪೂಜ್ಯ ಭಾವದಿಂದ ಅವರನ್ನು ಸ್ಮರಿಸುತ್ತಿದ್ರೆ ಇತ್ತ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕಾಗಿದೆ. ಅವರಿಂದ ಪ್ರೇರಣೆ ಪಡೆದುಕೊಂಡು ನಾವು ದೇಶ ಕಟ್ಟಬೇಕಾಗಿದೆ. ಇಂತಹದ್ದಕ್ಕೆಲ್ಲಾ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ನ್ನು ಜನರು ವಿರೋಧಿಸಬೇಕಾಗಿದೆ ಅಂದ್ರು.
PublicNext
09/11/2021 03:56 pm