ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಯೋಗಿ ಆದಿತ್ಯನಾಥ್-ಮೋದಿಗೆ ಪ್ರಿಯಾಂಕಾ ಖಡಕ್ ಸವಾಲ್

ದೆಹಲಿ:ಲಖೀಂಪುರ ರೈತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೆ ಸಿಟ್ಟಾಗಿದ್ದಾರೆ. ರಾಜ್ಯ ಸರ್ಕಾರವನ್ನ ಮತ್ತು ಕೇಂದ್ರ ಸರ್ಕಾರವನ್ನ ಮತ್ತೆ ಮತ್ತೆ ಪ್ರಶ್ನೆ ಕೇಳುತ್ತಿದ್ದಾರೆ. ಯಾರನ್ನ ನೀವೂ ರಕ್ಷಿಸುತ್ತೀರಿ ಅಂತಲೇ ಕಿಡಿಕಾರಿದ್ದಾರೆ.

ಲಖೀಂಪುರ ರೈತರ ಪ್ರಕರಣದ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ. ಸುಪ್ರಿಂ ಕೋರ್ಟ್ ಕೂಡ ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ಇದನ್ನ ತಿಳಿದುಕೊಂಡಿರೋ ಪ್ರಿಯಾಂಕಾ ಗಾಂಧಿ ಇವತ್ತು ಮತ್ತೆ ಮಾತನಾಡಿದ್ದಾರೆ.ಮಾನ್ಯ ಪ್ರಧಾನ ಮಂತ್ರಿಗಳೆ ಲಖೀಂಪುರ ಪ್ರಕರಣದಲ್ಲಿ ನೀವೂ ಯಾರನ್ನ ರಕ್ಷಿಸುತ್ತಿದ್ದೀರಾ ಎಂದು ಕೇಳಿದ್ದಾರೆ.

ರಾಜ್ಯ ಸರ್ಕಾರ ಅಪರಾಧಿಗಳನ್ನ ರಕ್ಷಿಸುವ ಕೆಲಸದಲ್ಲಿಯೇ ನಿರತವಾಗಿಯೇ. ಮುಖ್ಯ ಅಪರಾಧಿ ಅಭಿಷೇಕ್ ಮಿಶ್ರಾ ತಂದೆ ಅಜಯ್ ಮಿಶ್ರಾ ನಿಮ್ಮ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ನೀವೂ ಈ ಮೂಲಕ ಏನ್ ಸಂದೇಶ ಕೊಡುತ್ತಿದ್ದೀರಾ ಅಂತಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯನ್ನ ಕೇಳಿದ್ದಾರೆ ಪ್ರಿಯಾಂಕಾ ಗಾಂಧಿ.

Edited By :
PublicNext

PublicNext

08/11/2021 08:40 pm

Cinque Terre

61.5 K

Cinque Terre

5

ಸಂಬಂಧಿತ ಸುದ್ದಿ