ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್‌ಪಿಜಿ ಬೆಲೆಯಿಂದ ಕಂಗೆಟ್ಟ ಜನ ಸೌದೆ ಬಳಸುತ್ತಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬೆಲೆ ಏರಿಕೆ ವಿರುದ್ಧ ಮತ್ತೊಮ್ಮೆ ಅಸಮಾಧಾನಿತರಾಗಿದ್ದಾರೆ.

ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿ ಮಾತುಗಳಿಂದ ಬಹು ದೂರ ಉಳಿದಿದೆ. ಎಲ್‌ಪಿಜಿ ಬೆಲೆಯಿಂದ ಕಂಗೆಟ್ಟ ಲಕ್ಷಾಂತರ ಕುಟುಂಬಗಳು ಒತ್ತಾಯಪೂರ್ವಕವಾಗಿ ಸೌದೆ ಒಲೆಗಳನ್ನು ಹಚ್ಚುವಂತೆ ಈ ಸರ್ಕಾರ ಮಾಡಿದೆ. ಮೋದಿ ಜೀ ಅವರ ಅಭಿವೃದ್ಧಿ ವಾಹನವು ಹಿಮ್ಮುಖವಾಗಿ ಚಲಿಸುತ್ತಿದೆ ಮತ್ತು ವಾಹನದ ಬ್ರೇಕ್ ಸಹ ತುಂಡಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಅಡುಗೆ ಅನಿಲ ಬೆಲೆ ಹೆಚ್ಚಳದಿಂದ ದೇಶದ 42% ಜನ ಸಿಲಿಂಡರ್ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಸದ್ಯ ಅವರು ಸೌದೆ ಬಳಸುತ್ತಿದ್ದಾರೆ ಎಂಬ ಸಮೀಕ್ಷೆಯ ವರದಿಯೊಂದರ ಚಿತ್ರ ಹಂಚಿಕೊಂಡಿರುವ ರಾಹುಲ್ ಗಾಂಧಿ, ಇದರಿಂದ ಜನಜೀವನ ದುಸ್ತರವಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ 2,000ಕ್ಕೂ ಮಿಗಿಲಾಗಿದೆ. ಇದು ಎಲ್ಲರ ನೆಮ್ಮದಿಯನ್ನು ಕಿತ್ತುಕೊಂಡಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

07/11/2021 07:24 am

Cinque Terre

31.16 K

Cinque Terre

40

ಸಂಬಂಧಿತ ಸುದ್ದಿ