ತುಮಕೂರು: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೆರೆ-ಕಟ್ಟೆಗಳು ತುಂಬಿ ಹರೆಯುತ್ತಿದೆ. ಶಾಸಕ ಡಾ.ರಂಗನಾಥ್ ಇಲ್ಲಿಯ ಕುಣಿಗಲ್ ಕೆರೆಯಲ್ಲಿ ಬಾಗೀನ ಅರ್ಪಿಸಲು ಹೋಗಿದ್ದರು.ಆದರೆ ಬಾಗೀನ ಅರ್ಪಿಸಿದ ತಕ್ಷಣವೇ ಕೆರೆಯಲ್ಲಿ ಡೈವ್ ಹೊಡೆದರು.ಯಾಕೆ ಹೇಳ್ತೀವಿ ನೋಡಿ.
ಕೆರೆ ತುಂಬಿ ಹರಿಯುತ್ತಿದ್ದರೆ ಕೆಲವರಿಗೆ ಸಂಭ್ರಮವೋ ಸಂಭ್ರಮ. ಈಜು ಬರುತ್ತಿದ್ದರಂತೂ ಮುಗಿದೇ ಹೋಯಿತು. ಒಮ್ಮೆ ಡೈವ್ ಹೊಡೆದು ಮನಸ್ಫೂರ್ತಿ ಈಜಿಯೇ ಬಿಡ್ತಾರೆ. ಕುಣಿಗಲ್ ಕೆರೆ ತುಂಬಿ ಹರಿಯುತ್ತಿದೆ. ಈ ಕೆರೆಗೆ ಬಾಗೀನ ಅರ್ಪಿಸಲು ಬಂದಿದ್ದ ಶಾಸಕ ಡಾ.ರಂಗನಾಥ್ ಮಳೆಯಲ್ಲಿಯೇ ಬಾಗೀನ ಅರ್ಪಿಸಿದ್ದಾರೆ. ಒಂದು ಗಂಟೆಗೂ ಹೆಚ್ಚುಕಾಲ ಕೆರೆಯಲ್ಲಿ ಈಜಿ ಖುಷಿಪಟ್ಟಿದ್ದಾರೆ. ಈಗ ಇದೇ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
06/11/2021 08:04 pm