ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೂ ಧರಿಸಿ ಕೇದಾರದಲ್ಲಿ ಮೋದಿ ಪ್ರದಕ್ಷಣೆ : ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ

ನವದೆಹಲಿ: ಇತ್ತೀಚೆಗೆ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.ಸದ್ಯ ಮೋದಿ ಕೇದಾರನಾಥ ಭೇಟಿ ಸಂದರ್ಭದಲ್ಲಿ ಮೋದಿ ಶೂ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಒಂದು ವೇಳೆ ರಾಹುಲ್ ಗಾಂಧಿ ಈ ಕೃತ್ಯ ಎಸಗಿದ್ದರೆ ದೇಶಾದ್ಯಂತ ಅವರನ್ನು ದೇಶದ್ರೋಹಿ ಎಂಬಂತೆ ಪ್ರತಿಬಿಂಬಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮೋದಿ ದೇವಾಲಯ ಆವರಣದಲ್ಲಿ ಶೂ ಧರಿಸಿ ನಡೆಯುತ್ತಿರುವ ವಿಡಿಯೊ ಹಂಚಿಕೊಂಡು, ಮೋದಿ ದೇವಾಲಯದಲ್ಲಿ ಶೂ ಧರಿಸಿ ನಮಸ್ಕರಿಸುತ್ತಿದ್ದಾರೆ ಎಂದರೆ ಅದೂ ಸಂಪ್ರದಾಯವಾಗಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ನರೇಂದ್ರ ಮೋದಿ ಧರಿಸಿರುವುದು ಶೂ ಅಲ್ಲ, ಬಟ್ಟೆಯ ಕವಚ. ಅಲ್ಲಿನ ಚಳಿಯಲ್ಲಿ ಭಕ್ತಾದಿಗಳು ವುಲನ್ ಸಾಕ್ಸ್ ಧರಿಸುವುದು ಸಾಮಾನ್ಯ ಎಂದು ಮೋದಿ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ.

Edited By : Nirmala Aralikatti
PublicNext

PublicNext

06/11/2021 02:11 pm

Cinque Terre

126.49 K

Cinque Terre

160

ಸಂಬಂಧಿತ ಸುದ್ದಿ