ಉಡುಪಿ: ಬಿಜೆಪಿ ಸೋಲಿಸಿದರೆ ಪೆಟ್ರೋಲ್ ದರ ಕಡಿಮೆಯಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಅವರು ಉಪಚುನಾವಣೆ ಫಲಿತಾಂಶ ಗಮನದಲ್ಲಿಟ್ಟುಕೊಂಡು ಅವರು ಆ ರೀತಿ ಮಾತನಾಡಿರಬಹುದು.
ಸಿಂದಗಿಯಲ್ಲಿ 30 ಸಾವಿರ ಮತಗಳ ಅಂತರದಲ್ಲಿ ನಾವು ಗೆದ್ದಿದ್ದೇವೆ.ಅನುಕಂಪದ ಆಧಾರದಲ್ಲಿ ಸೋಲು-ಗೆಲುವು ಬರುವುದು ಸ್ವಾಭಾವಿಕ ಎಂದು ಹೇಳಿದ್ದಾರೆ
ಪೆಟ್ರೋಲ್ ಡೀಸೆಲ್ ದರ ಇಳಿಕೆಯಿಂದಾಗಿ ಅಂದಾಜು 2100 ಕೋಟಿ ರೂಪಾಯಿ ಸರಕಾರಕ್ಕೆ ತೆರಿಗೆ ಹೊರೆ ಬೀಳುತ್ತದೆ.ಸರಕಾರಕ್ಕೆ ಅಭಿನಂದನೆ ಹೇಳಬೇಕಾದ್ದು ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷ ನಾಯಕರ ಕ್ರಮ.
ಏನಾದರೂ ಮಾತನಾಡುವುದು ತನ್ನ ಹಕ್ಕು ಎಂದು ಸಿದ್ದರಾಮಯ್ಯ ಭಾವಿಸಿದ್ದರೆ ಆಕ್ಷೇಪಿಸುವುದಿಲ್ಲ.
ಹಾನಗಲ್ ನಲ್ಲಿ ಮುಂದೆ ಗೆದ್ದೇ ಗೆಲ್ಲುತ್ತೇವೆ, ನಮಗೆ ಅನುಮಾನ ಇಲ್ಲ.ಸಿದ್ದರಾಮಯ್ಯನವರು ಕಾಲಕಾಲಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಹಿಂದೆಯೂ ಮುಖ್ಯಮಂತ್ರಿ ಆಗಿದ್ದವರೇ ಸೋತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿಯಾಗಿದ್ದವರೇ ಸೋತಿಲ್ಲವೆ?ಮುಖ್ಯಮಂತ್ರಿ ಕ್ಷೇತ್ರದಲ್ಲಿ ಸೋಲುವುದು ಏನೂ ದೊಡ್ಡ ವಿಚಾರವಲ್ಲ.ಈ ವಿಚಾರವನ್ನು ಸಿದ್ದರಾಮಯ್ಯನವರಿಗೆ ನೆನಪಿಸಲು ಬಯಸುತ್ತೇನೆ ಎಂದು ಸಿದ್ದು ಕಾಲೆಳೆದಿದ್ದಾರೆ.
PublicNext
05/11/2021 04:45 pm