ಬೆಂಗಳೂರು:ರಾಜ್ಯ ಸರ್ಕಾರವೂ ಈಗ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ತಲಾ 7 ರೂಪಾಯಿ ಕಡಿಮೆ ಮಾಡೋ ಮೂಲಕ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಗಿಫ್ಟ್ ಕೊಡಲು ನಿರ್ಧರಿಸಿದೆ. ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಷಯವನ್ನ ಟ್ವಿಟರ್ ಮೂಲಕ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಆದರೆ ಇದು ಇಂದು ಸಂಜೆಯಿಂದಲೇ ಜಾರಿಗೊಳ್ಳುತ್ತಿದೆ.
ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸಿದೆ. ಡೀಸೆಲ್ ಗೆ 10 ರೂಪಾಯಿ ಹಾಗೂ ಪೆಟ್ರೋಲ್ ಗೆ 5 ರೂಪಾಯಿಂತೆ ದರ ಕಡಿತಗೊಳಿಸಿದೆ. ಆದರೆ ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ನಿರ್ಧಾರ ಇಂದು ಸಂಜೆಯಿಂದಲೇ ಜಾರಿ ಆಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಗೆ ತಲಾ 7 ರೂಪಾಯಿ ಕಡಿತಗೊಳಿಸಿದೆ.ಇದರಿಂದ ರಾಜ್ಯದ ಬೊಕ್ಕಸಕ್ಕೆ೨,೧೦೦ ಕೋಟಿ ನಷ್ಟ ಆಗುತ್ತದೆ ಅಂತಲೂ ಹೇಳಿದ್ದಾರೆ ಸಿಎಂ ಬಸರಾಜ್ ಬೊಮ್ಮಾಯಿ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡ ಮಹತ್ವದ ನಿರ್ಧಾರದಿಂದ ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ ಬೆಲೆ ಅಂದಾಜು 95.50 ಪೈಸೆ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ.
PublicNext
04/11/2021 07:34 am