ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಿಧ ರಾಜ್ಯಗಳ ಬೈ ಎಲೆಕ್ಷನ್ ಫಲಿತಾಂಶ: ಗೆದ್ದವರಾರು ಸೋತವರಾರು ಇಲ್ಲಿದೆ ಡಿಟೈಲ್ಸ್

ನವದೆಹಲಿ: ಲೋಕಸಭಾ ಚುನಾವಣೆ ಮುಂಚೇನೆ ವಿವಿಧ ರಾಜ್ಯಗಳಲ್ಲಿ 23 ವಿಧಾನಸಭಾ ಕ್ಷೇತ್ರ ಹಾಗೂ 3 ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದೆ.ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರ ಸೇರಿದಂತೆ ಇತರ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಈಗ ಹೊರ ಬಿದ್ದಿದೆ. ಅದರ ಡಿಟೈಲ್ ಇಲ್ಲಿದೆ. ನೋಡಿ.

ಬಿಹಾರದ ಕುಶೇಶ್ವರ ಮತ್ತು ತಾರಾಪುರ ಕ್ಷೇತ್ರದಲ್ಲಿ ಜೆಡಿಯು ಗೆಲುವು ಸಾಧಿಸಿದೆ.ಇತ್ತೀಚಿಗೆ ಜೈಲಿನಿಂದ ಹೊರಬಂದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಕೂಡ ಪಕ್ಷ ಗೆಲ್ಲಬೇಕು ಅಂತ ಭಾರಿ ಪ್ರಚಾರ ಮಾಡಿದ್ದರು. ಆದರೆ ಏನೂ ಪ್ರಯೋಜನ ಆಗಲೇ ಇಲ್ಲ.ತಾರಾಪುರ ಕ್ಷೇತ್ರದಲ್ಲಿ ಆರ್‌ಜೆಡಿ ಸೋತು ಜೆಡಿಯು ಗೆಲುವು ಸಾಧಿಸಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ನಾಲ್ಕೂ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ಮೇಘಾಲಯದಲ್ಲಿ ಎನ್‌ಪಿಪಿ ಎರಡು ಸ್ಥಾನದಲ್ಲಿ ಜಯಸಾಧಿಸಿದೆ.ಆದರೆ ಇಲ್ಲಿ ಯುಡಿಪಿ ಒಂದೇ ಒಂದು ಸ್ಥಾನ ಗೆದ್ದುಕೊಂಡಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷ್ನಲ್ ಫ್ರಂಟ್ ಗೆ ಒಂದೇ ಸ್ಥಾನ ಗೆಲ್ಲೋಕೆ ಸಾಧ್ಯವಾಗಿದೆ.

ಕಾಂಗ್ರೆಸ್ ಹಿಮಾಚಲಪ್ರದೇಶದ ಮೂರು ಸ್ಥಾನಗಳನ್ನ ಗೆದ್ದುಕೊಂಡಿದೆ.ಇದರಿಂದ ಆಡಳಿತಾರೂಡ ಪಕ್ಷ ಬಿಜೆಪಿಗೆ ಇಲ್ಲಿ ತೀವ್ರ ಮುಖಭಂಗ ಆಗಿದೆ.ಮಂಡಿ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ.ಕಾಂಗ್ರೆಸ್ ಗೆಲುವು ಸಾಧಿಸಿದೆ. ವಿಧಾನಸಭಾ ಕ್ಷೇತ್ರ ಕಥೆನೂ ಅಷ್ಟೇ ಮೂರಕ್ಕೆ ಮೂರರಲ್ಲೂ ಬಿಜೆಪಿಗೆ ಸೋಲಾಗಿದೆ.

ರಾಜಸ್ಥಾನದ ವಲ್ಲಭನಗರ ಮತ್ತು ಧಾರಿಯಾವಾಡ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಒಟ್ಟಾರೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳೆ ಮೇಲುಗೈ ಸಾಧಿಸಿವೆ.

Edited By :
PublicNext

PublicNext

02/11/2021 09:14 pm

Cinque Terre

25.8 K

Cinque Terre

0

ಸಂಬಂಧಿತ ಸುದ್ದಿ