ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ತವರು ಜಿಲ್ಲೆಯಲ್ಲಿ ಗೆದ್ದಿರೋದು ಸಂತಸ ತಂದಿದೆ : ಡಾ.ಜಿ.ಪರಮೇಶ್ವರ್

ತುಮಕೂರು : ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಇನ್ನು ಹಾನಗಲ್ ನಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಈ ಜಯದ ಬೆನ್ನಲ್ಲೇ ತುಮಕೂರಿನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಿಂದಗಿಯಲ್ಲಿ ನಮ್ಮ ಪಕ್ಷ ಅಷ್ಟೊಂದು ಮತ ಸೆಳೆಯಲಿಕ್ಕೆ ಆಗಿಲ್ಲಅದಕ್ಕೆ ಕಾರಣ ಏನು ಅನ್ನೋದನ್ನ ಪರಿಶೀಲನೆ ಮಾಡ್ತೀವಿ ಹಾನಗಲ್ ಸಿಎಂ ತವರು ಜಿಲ್ಲೆಯಾದ್ರು ನಾವು ಗೆದ್ದಿರೋದು ಸಂತಸ ತಂದಿದೆ ಎಂದಿದ್ದಾರೆ.

ಜನ ಇವತ್ತು ಶ್ರೀನಿವಾಸ್ ಮಾನೆಯವರ ಕೈ ಹಿಡಿದಿದ್ದಾರೆ. ಅವರು ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿದ್ರು, ಜನರ ಸಂಪರ್ಕಗಳಿಸಿದ್ರು, ಹಾಗಾಗಿ ಜನ ಕೈ ಹಿಡಿದಿದ್ದಾರೆ. ಎರಡು ಕ್ಷೇತ್ರದಲ್ಲಿ ಜನತಾದಳ ನೆಲೆ ಇಲ್ಲದ ರೀತಿಯಾಗಿದೆ. ಸಿಂದಗಿಯಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು ಈಗ ನೆಲೆ ಕಳೆದುಕೊಂಡಿದೆ. ಪೆಟ್ರೋಲ್, ಡಿಸೇಲ್ ಅಗತ್ಯವಸ್ತು ಬೆಲೆ ಏರಿಕೆಯಾದ್ರು ಸಿಂದಗಿಯಲ್ಲಿ ಇನ್ನೂ ಅವರಿಗೆ ಮತ ಹಾಕ್ತಾರೆ ಅದು ನನಗೆ ಆಶ್ಚರ್ಯವಾಗಿದೆ.

ಇವತ್ತೀನ ಫಲಿತಾಂಶ ನೋಡಿದ್ರೆ, ಅಗತ್ಯ ವಸ್ತು ಬೆಲೆ ಏರಿಕೆಗೆ ಅರ್ಥ ಇಲ್ಲ ಅನ್ನಿಸುತ್ತೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೆಚ್ಚು ಕೆಲಸ ಮಾಡಬೇಕು ಅಂತಾ ಸಂದೇಶ ಕೊಟ್ಟಿದೆ. ಹಾನಗಲ್ ಫಲಿತಾಂಶ ಸಿಎಂ ಬೊಮ್ಮಾಯಿಗೆ ಒಂದು ಸಂದೇಶ.

ಇನ್ನೂ ಪರಿಣಾಮಕಾರಿಯಾಗಿ ಕಾಂಗ್ರೆಸ್ ಮುಖಂಡರು ಕೆಲಸ ಮಾಡಬೇಕು. ಒಂದು ಸೀಟ್ ಗೆದ್ದರೆ ಸಾಲದು ಇನ್ನೂ ಗೆಲ್ಲಬೇಕಿತ್ತು.ಹಾಗಾಗಿ ಇನ್ನೂ ಹಚ್ಚಿನ ರೀತಿಯಲ್ಲಿ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರ್ತೀವಿ ಎಂದಿದ್ದಾರೆ.

Edited By : Nagesh Gaonkar
PublicNext

PublicNext

02/11/2021 07:11 pm

Cinque Terre

65.59 K

Cinque Terre

2