ನವದೆಹಲಿ: ನಾನು ಇಂತಹ ಎಷ್ಟು ಚುನಾವಣೆಗಳನ್ನು ಕಂಡಿಲ್ಲ? ಯಾವುದೇ ಕಾರಣಕ್ಕೂ ಈ ಚುನಾವಣೆ ದಿಕ್ಸೂಚಿಯಾಗಲು ಸಾಧ್ಯವಿಲ್ಲ. ಇನ್ನೂ ಈ ದೇವೇಗೌಡ ಇನ್ನೂ ಬದುಕಿದ್ದಾನೆ, ಪಕ್ಷವನ್ನು ಮತ್ತೆ ಕಟ್ಟುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡಬಹುದು. ಆದರೆ ಜನರಲ್ ಎಲೆಕ್ಷನ್ನಲ್ಲಿ ಮಾಡಲು ಸಾಧ್ಯವಿಲ್ಲನಾನು ಮುಂದೆ ಹೆಚ್ಚು ನಿಗಾ ವಹಿಸಲಿದ್ದೇನೆ ಎಂದು ಹೇಳಿದ್ದಾರೆ.
PublicNext
02/11/2021 06:51 pm