ಪಂಜಾಬ್: ಮಾಜಿ ಕ್ರಿಕೆಟರ್ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮಾತಿಗೆ ನಿಂತರೆ ಮುಗೀತು. ಅಲ್ಲಿ ಎಲ್ಲವೂ ಕಲರ್ ಫುಲ್ ಆಗಿಯೇ ಕಾಣುತ್ತದೆ ಕೇಳುತ್ತದೆ. ಅದರಂತೆ ಇಲ್ಲಿಯ ಬಹಿರಂಗ ಸಭೆಯಲ್ಲಿ ಸಿಧು, ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಛನ್ನಿಯನ್ನ ಗೇಲಿ ಮಾಡಿದ್ದಾರೆ. ಅದು ಆಧ್ಯಾತ್ಮದ ಚೌಕಟ್ಟಿನಲ್ಲಿಯೇ ಟೀಕಿಸಿದ್ದಾರೆ. ಮೇಲೊಬ್ಬ ದೇವರಿದ್ದಾನೆ. ಆತನ ನ್ಯಾಯಾಲಯದಲ್ಲಿ ಎಲ್ಲವೂ ಸಾಧ್ಯವಿದೆ. ಆತ ನ್ಯಾಯ ಕೊಡೋದಿಲ್ಲ ಅನ್ಕೋಬೇಡಿ. ಆ ದೇವರು ಎಲ್ಲರಿಗೂ ಸರಿಯಾಗಿಯೇ ನ್ಯಾಯ ಕೊಡ್ತಾನೆ ಎಂದು ಸಿಧು ಪಂಜಾಬಿ ಭಾಷೆಯಲ್ಲಿಯೇ ಮಾತನಾಡಿ ಪರೋಕ್ಷವಾಗಿಯೇ ಸಿಎಂ ಛನ್ನಿಯನ್ನ ಕುಟುಕಿದ್ದಾರೆ.
PublicNext
02/11/2021 04:38 pm