ಇಂದು ಶೋಭಾ ಕರಂದ್ಲಾಜೆ ಹಾಸನಾಂಬೆ ದರ್ಶನ ಪಡೆಯಲು ಕ್ಷೇತ್ರಕ್ಕೆ ಆಗಮಿಸಿ, ದರ್ಶನ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಹಾಸನಾಂಬೆ ದರ್ಶನ ಪಡೆದಿದ್ದೇನೆ, ತಾಯಿಯ ಆಶೀರ್ವಾದದಿಂದ ಮಂತ್ರಿಯಾಗಿ ಬಂದಿದ್ದೇನೆ ನಾಡಿನ ರೈತರ ಕೆಲಸ ಮಾಡಲು ದೇವಿ ಕೃಪೆ ತೋರಿದ್ದಾಳೆ ಈ ಬಾರಿ ಮಳೆ ಚೆನ್ನಾಗಿ ಆಗಿದ್ದು ಬೆಳೆ ಚೆನ್ನಾಗಿ ಆಗಬೇಕಿದೆ, ಸೈನ್ಯ ಮತ್ತು ರೈತ ದೇಶ ಕಾಯುವ ಯೋಧರು ಇಬ್ಬರಿಗೂ ಒಳ್ಳಯದಾಗಲಿ ಎಂದು ದೇವಿಯಲ್ಲಿ ಪ್ರಾರ್ಥಸಿದ್ದೇನೆ ಎಂದು ಹೇಳಿದ್ದಾರೆ.
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತು ಮುಂದುವರಿಸಿದ ಇವರು
ಫಲಿತಾಂಶ ಇನ್ನೂ ಆರಂಭಿಕ ಹಂತದಲ್ಲಿದೆ ,ಸಿಂದಗಿಯಲ್ಲಿ ನಾವು ಮುಂದೆ ಇದ್ದೇವೆ ಹಾನಗಲ್ ನಲ್ಲೂ ಟಫ್ ಫೈಟ್ ಇದ್ದು, ನೆಕ್ ಟು ನೆಕ್ ಇದೆ ಎರಡೂ ಕ್ಷೇತ್ರದಲ್ಲೂ ನಾವು ಗೆಲ್ಲುವ ವಿಶ್ವಾಸವಿದೆ ಎಂದರು
ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಈಗಾಗಲೇ ನಾವು ೧೧ ಬಾರಿ ಮಾತುಕತೆಯನ್ನು ನಡೆಸಿದ್ದೇವೆ
ರಸ್ತೆಯಲ್ಲಿ ನಿಂತು ಪ್ರತಿಭಟಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ, ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಲಿಖಿಂಪುರ ರೈತರ ಮೇಲೆ ಕಾರು ಹರಿದು ಸಾವು ಪ್ರಕರಣದಲ್ಲಿ ಉತ್ತರ ಪ್ರದೇಶ ಚುನಾವಣೆ ಹಿನ್ನಲೆ ಕಾಂಗ್ರಸ್ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಷಡ್ಯಂತ್ರ ನಡೆಸುತ್ತಿವೆ ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಈ ಕೊಲೆ, ಸಾವಿನ ಬಗ್ಗೆ ಸಮಿತಿಯನ್ನು ನೇಮಕಮಾಡಲಾಗಿದೆ ವರದಿಯ ನಂತರ ಘಟನೆ ಬಗ್ಗೆ ಸ್ಪಷ್ಟತೆ ದೊರೆಯಲಿದೆ ಎಂದು ಹೇಳಿದರು.
PublicNext
02/11/2021 12:46 pm