ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದ್ಯಕ್ಕಿಲ್ಲ ಪುನೀತ್ ಸಮಾಧಿ ಸಾರ್ವಜನಿಕ ದರುಶನ: ಸಚಿವ ಆರಗ ಜ್ಞಾನೇಂದ್ರ

ಚಿಕ್ಕಬಳ್ಳಾಪುರ: ಪುನೀತ್ ರಾಜಕುಮಾರ್ ಸಮಾಧಿ ಬಳಿ ಸದ್ಯ ಮನೆಯವರನ್ನ ಬಿಟ್ಟರೆ ಯಾರಿಗೂ ದರುಶನ ಪಡೆಯೋಕೆ ಅವಕಾಶ ಇಲ್ಲವೇ ಇಲ್ಲ. ಸಾರ್ವಜನಿಕರು ಇಲ್ಲಿಗೆ ಬಂದು ದರುಶನ ಪಡೆಯೋ ವ್ಯವಸ್ಥೆ ಮಾಡಲು ಇನ್ನೂ ಮೂರ್ನಾಲ್ಕು ದಿನವೇ ಬೇಕು. ಅಲ್ಲಿವರೆಗೂ ಅವಕಾಶ ಇಲ್ಲವೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದಂಗವಾಗಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವ್ರು ಧ್ವಜಾರೋಹಣದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಇವ್ರು, ಸಾವರ್ಜನಿಕರ ದರುಶನಕ್ಕೆ ಈಗಲೇ ಅವಕಾಶ ಮಾಡಿದರೆ ಜನ ಮುಗಿ ಬೀಳುತ್ತಾರೆ. ಈ ಕಾರಣಕ್ಕೇನೆ ಕುಟುಂಬದ ವಿಧಿ-ವಿಧಾನಗಳು ಮುಗಿದ ಬಳಿಕವೇ ಸುತ್ತಲೂ ಬೇಲಿ ಹಾಕಿಯೇ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Edited By :
PublicNext

PublicNext

01/11/2021 06:06 pm

Cinque Terre

148.44 K

Cinque Terre

3