ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಮೊಮ್ಮಗ ರಾಹುಲ್ ಗಾಂಧಿಗೆ ಒಂದು ಜೀವನದ ಸತ್ಯವನ್ನ ಹೇಳಿ ಹೋಗಿದ್ದಾರೆ. ಆ ಸತ್ಯವನ್ನ ಇಂದಿಗೂ ಪಾಲಿಸ್ತಾರೆ ರಾಹುಲ್ ಗಾಂಧಿ. ಏನ್ ಅದು ಅಂತಿರೋ. ಬನ್ನಿ, ಹೇಳ್ತಿವಿ.
ರಾಹುಲ್ ಗಾಂಧಿ ತಮ್ಮ ಅಜ್ಜಿಯ ಅಂತ್ಯಕ್ರಿಯೆ ಸಮಯದಲ್ಲಿ ಕೇವಲ 14 ವರ್ಷದವರು ಆಗಿದ್ದರು. ಅಜ್ಜಿ ಇಂದಿರಾ ಗಾಂಧಿ ಸಾಯುವ ಮುನ್ನವೇ ಮೊಮ್ಮಗನಿಗೆ ನೀನು ಎಂದೂ ಕಣ್ಣೀರು ಹಾಕಬಾರು. ಎಂತಹ ಕಷ್ಟ ಬಂದರೂ ಸರಿಯೇ. ಕಣ್ಣೀರು ಹಾಕಬಾರದು ಅಂತ ಹೇಳಿದ್ದರು. ಆದರೆ ಅಜ್ಜಿಯ ಅಗಲಿಕೆಯಿಂದ ರಾಹುಲ್ ಗಳಗಳನೇ ಅತ್ತಿದ್ದಾರೆ. ಆ ಸಮಯದಲ್ಲಿ ವೀಡಿಯೋ ಈಗ ವೈರಲ್ ಆಗಿದೆ.
ಅಂದ್ಹಾಗೆ ನಿನ್ನೆ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಇತ್ತು. ಅದಕ್ಕೇನೆ ಸ್ವತಃ ರಾಹುಲ್ ಗಾಂಧಿ ಅಜ್ಜಿಯ ಅಂತ್ಯಕ್ರಿಯೆ ಸಮಯದ ತಮ್ಮ ವೀಡಿಯೋವನ್ನ ಹಂಚಿಕೊಂಡು ಅಜ್ಜಿ ಹೇಳಿದ ಮಾತನ್ನೂ ನೆನಪಿಸಿಕೊಂಡಿದ್ದಾರೆ.
PublicNext
01/11/2021 04:03 pm