ಕೋಲ್ಕತಾ: ಬಂಗಾಳದ ವಿಧಾನ ಸಭೆ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಟಿಎಂಸಿ ನಾಯಕ ರಾಜೀವ್ ಬ್ಯಾನರ್ಜಿ ಮರಳಿ ತಮ್ಮ ಪಕ್ಷಕ್ಕೆ ಬಂದಿದ್ದಾರೆ. ನನ್ನನ್ನು ವಾಪಸ್ ಸೇರಿಸಿಕೊಂಡ ತೃಣಮೂಲ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು ನಾನು ಬಿಜೆಪಿ ಸೇರಿಕೊಂಡು ತಪ್ಪು ಮಾಡಿದೆ ಎಂದು ರಾಜೀವ್ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.
ಬಿಜೆಪಿಯು ನನಗೆ ಬಣ್ಣ ಬಣ್ಣದ ಚಿತ್ರ ತೋರಿಸಿತ್ತು ಎಂದು ಹೇಳಿದ್ದಾರೆ. 'ಬಿಜೆಪಿ ಸೇರಿಕೊಳ್ಳುವ ಮುನ್ನ ಉದ್ಯೋಗ ಮತ್ತು ಕೃಷಿಗೆ ಸಂಬಂಧಿಸಿದಂತೆ ಅನೇಕ ಭರವಸೆಗಳನ್ನು ನೀಡಲಾಗಿತ್ತು. ಅದು ಈಡೇರಲಿಲ್ಲ' ಎಂದು ಬಿಜೆಪಿ ವಿರುದ್ಧ ರಾಜೀವ್ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
PublicNext
31/10/2021 05:53 pm