ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದ ಕಲಾವಿದರೆಲ್ಲ ಪುನೀತ್ ಸರಳತೆ-ಅಜಾತಶತ್ರು ಮನೋಭಾವ ಬೆಳೆಸಿಕೊಳ್ಳಿ:ಡಿಕೆಶಿ

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಶತ್ರುಗಳೇ ಇರಲಿಲ್ಲ.ಸಿನಿಮಾರಂಗದಲ್ಲಿ ಪ್ರತಿಸ್ಪರ್ಧಿಗಳು ಇದ್ದರು. ಅವರೂ ಕೂಡ ಪುನೀತ್ ಸರಳತೆಗೆ ಗೆಳೆಯರಾಗಿ ಬಿಡುತ್ತಿದ್ದರು.ಇಂತಹ ಅಪ್ಪು ಗುಣವನ್ನ ಕೊಂಡಾಡಿದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕನ್ನಡ ಚಿತ್ರರಂಗದ ಕಲಾವಿದರು ಪುನೀತ್ ಹಾಗೇನೆ ಅಜಾತ ಶತ್ರುಗಳಾಗಿ ಅಂತಲೇ ಹೇಳಿದ್ದಾರೆ ಡಿಕೆಶಿ

ಕಂಠೀರವ ಸ್ಟುಡಿಯೋದಲ್ಲಿ ನಡೆದ ಪುನೀತ್ ಅಂತ್ಯಕ್ರಿಯೆ ಮುಗಿದ ಬಳಿಕ ಡಿಕೆಶಿ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ. ಪುನೀತ್ ಸರಳ ವ್ಯಕ್ತಿ ಶತ್ರುಗಳೇ ಇಲ್ಲದ ವ್ಯಕ್ತಿತ್ವ. ಇಂತಹ ಪುನೀತ್ ರನ್ನ ನೋಡಲು ಕಳೆದ ಮೂರು ದಿನಗಳಿಂದಲೂ ಜನ ಸಾಗರವೇ ಹರಿದು ಬರುತ್ತಿದೆ. ಇಷ್ಟು ಒಳ್ಳೆ ಮನುಷ್ಯನನ್ನ ಕಳೆದು ಕೊಂಡದ್ದು ನೋವಿದೆ. ಕನ್ನಡ ಚಿತ್ರರಂಗದ ಇತರ ಕಲಾವಿದರು ಕೂಡ ಪುನೀತ್ ಸರಳತೆ ಮತ್ತು ಅಜಾತಶತ್ರು ಮನೋಭಾವ ಬೆಳೆಸಿಕೊಳ್ಳಿ ಅಂತಲೂ ಹೇಳಿದರು ಡಿಕೆಶಿ.

Edited By :
PublicNext

PublicNext

31/10/2021 12:58 pm

Cinque Terre

27.15 K

Cinque Terre

3

ಸಂಬಂಧಿತ ಸುದ್ದಿ