ಪಣಜಿ: ಗೋವಾ ಜನರನ್ನು ಭೇಟಿಯಾಗಿ ನನಗೆ ಖುಷಿಯಾಗಿದೆ. ಇಲ್ಲಿನ ಜನರ ಕಣ್ಣಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಕಂಡಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಗೋವಾದಲ್ಲಿ ಬೈಕ್ ಸವಾರನ ಹಿಂಬದಿಯಲ್ಲಿ ಕುಳಿತು ಕೆಲಹೊತ್ತು ಪಯಣಿಸಿದ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಲ್ಲಿನ ಜನರಲ್ಲಿ ಆಶಾವಾದವೂ ಇದೆ ಎಂದಿದ್ದಾರೆ. ತಾವು ಪಯಣಿಸಿದ ಬೈಕ್ ಸವಾರನನ್ನು 'ಪೈಲಟ್' ಎಂದಿರುವ ರಾಹುಲ್ ಗಾಂಧಿ ನಾನು ಈ ಪೈಲಟ್ ಜೊತೆ ಅನೇಕ ವಿಷಯಗಳನ್ನು ಚರ್ಚಿಸಿದ್ದೇನೆ. ಗೋವಾದ ಮಹಾಜನತೆಗೆ ಕಾಂಗ್ರೆಸ್ ಬೇಕಾಗಿದೆ ಎಂದು ರಾಹುಲ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
30/10/2021 09:36 pm