ವಿಜಯಪುರ: ಸಿದ್ದರಾಮಯ್ಯ ಕಂಬಳಿ ಮರ್ಯಾದೆ ಕಳೆಯುತ್ತಿದ್ದಾರೆ. ನಾವ್ಯಾರೂ ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಹೋಗಿ ಬಂದಲ್ಲೆಲ್ಲ ಜಾತಿ ವಿಚಾರ ಎತ್ತಿಕೊಂಡು ಮಾತನಾಡವುದು ಸರಿಯಲ್ಲ ಸಿದ್ದರಾಮಯ್ಯ ಹಿರಿಯರು. ಮೋದಿ ಬಗ್ಗೆ ನಮ್ಮ ಪಕ್ಷದ ಬಗ್ಗೆ ಹುಚ್ಚುಚ್ಚಾರೆ ಮಾತಾಡೋದು ಬಿಡಬೇಕು ಎಂದು ಸಚಿವ ಸಿಸಿ ಪಾಟೀಲ್ ಅವರು ಸಿದ್ದರಾಮಯ್ಯ ಮೇಲೆ ಗರಂ ಆಗಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್ 2 ತಾರೀಕು ಚುನಾವಣೆ ಫಲಿತಾಂಶ ಬಂದಾಗ ಎಲ್ಲರಿಗೆ ಎಲ್ಲವೂ ಅರ್ಥವಾಗುತ್ತೆ. ಸಿದ್ದರಾಮಯ್ಯ ಮಾತಿನ ಧಾಟಿ ಸುಧಾರಿಸಿಕೊಳ್ಳಲಿ. ಇಷ್ಟೊಂದು ಮಾತಾಡುವ ಅವಶ್ಯಕತೆ ಇರಲಿಲ್ಲ. 'ಸಿದ್ದರಾಮಯ್ಯ ಹುಚ್ಚ ಹುಚ್ಚರಂತೆ ಏನೇನೋ ಮಾತಾಡ್ತಾರೆ" ಎಂದು ಸಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
PublicNext
28/10/2021 08:52 pm