ಹುಬ್ಬಳ್ಳಿ: ಕಾರ್ಯಕರ್ತರಲ್ಲಿ ಭಯ ಸೃಷ್ಟಿ ಮಾಡಲು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ರಾಜ್ಯದಲ್ಲಿ ಈ ರೀತಿ ಆಗುತ್ತದೆ. ಇಡಿ. ಐಡಿ ಗೆ ನಾವು ಹೆದರುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಡಿಕೆಶಿ ಆಪ್ತರ ಮೇಲೆ ದಾಳಿ ವಿಚಾರವಾಗಿ ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಟ್ರ್ಯಾಕ್ಟರ್ ಶೆಟ್ಟರ ಮೇಲೆ ದಾಳಿ ಆಗಿದೆ. ಇದ್ಯಾವುದೂ ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಲ್ಲ. ಬೈ ಎಲೆಕ್ಷನ್ ವೇಳೆ ಅಷ್ಟೇ ಅಲ್ಲ. ಮಾನೆ ಜೊತೆ ಮುಂಚೆಯಿಂದಲೂ ಡಿಕೆಶಿ ಇದ್ದವರು. ಇದು ಯಾವುದೇ ಪರಿಣಾಮ ಬೀರಲ್ಲ ಎಂದು ಅವರು ಹೇಳಿದರು.
PublicNext
28/10/2021 02:18 pm