ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಯಶಸ್ವಿ ಆಡಳಿತಗಾರ : ಮೋದಿ ಕೊಂಡಾಡಿದ ಶಾ

ನವದೆಹಲಿ: ಪ್ರಧಾನಿಯವರ 20 ವರ್ಷದ ರಾಜಕೀಯ ಜೀವನದ ಕುರಿತಾಗಿ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೋದಿ ಕಾರ್ಯ ವೈಖರಿಯನ್ನು ಕೊಂಡಾಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಿಕ್ಕ ಅತ್ಯಂತ ಯಶಸ್ವಿ ಆಡಳಿತಗಾರರೆಂದರೆ ಅದು ಪ್ರಧಾನಿ ನರೇಂದ್ರ ಮೋದಿ.

“2014ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ನೀತಿ ಗ್ರಹಣದ ಸಮಸ್ಯೆ ಇತ್ತು. ಸಂಸತ್ತಿನ ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಧಾನಿಯೆಂದುಕೊಂಡಿದ್ದರು.

ರಾಷ್ಟ್ರೀಯ ಸುರಕ್ಷಾ ನೀತಿಯೂ ಇರಲಿಲ್ಲ. ಮೋದಿಯವರು ಪ್ರಧಾನಿಯಾದ ನಂತರ ದೇಶಕ್ಕೆ ಗೌರವ ಸಿಕ್ಕಿದೆ. ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನಿಯಮಗಳ ವಿಚಾರದಲ್ಲಿ ಭಾರತವನ್ನು ವಿಭಿನ್ನ ಪಥಕ್ಕೆ ಮೋದಿಯವರು ಕೊಂಡೊಯ್ದಿದ್ದಾರೆ’ ಎಂದು ಶಾ ಶ್ಲಾಘಿಸಿದ್ದಾರೆ.

Edited By : Nirmala Aralikatti
PublicNext

PublicNext

28/10/2021 07:21 am

Cinque Terre

31.18 K

Cinque Terre

33

ಸಂಬಂಧಿತ ಸುದ್ದಿ