ಹುಬ್ಬಳ್ಳಿ: ಬಿಜೆಪಿಯವರಿಗೆ ಹಣ ಹಂಚೋದೆ ಕೆಲಸ. ಒಂದೊಂದು ಕ್ಷೇತ್ರದಲ್ಲಿ 10-12 ಸಚಿವರು ಠಿಕಾಣಿ ಹೂಡಿದ್ದಾರೆ. ಹಣದ ಚೀಲ ತುಂಬಿಕೊಂಡು ಬಂದಿದ್ದಾರೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡುತ್ತೆವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿಯವರು ಅಭಿವೃದ್ಧಿ ಏನೂ ಮಾಡಿಲ್ಲ. ಇವಾಗ ಮನೆ ಹೊಟ್ಟೆ ಅಂತಾ ಆದೇಶ ಮಾಡಿಕೊಂಡು ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ಚುನಾವಣೆ ಹಿನ್ನೆಲೆಯಲ್ಲಿ ಆದೇಶ ಮಾಡಿದ್ದಾರೆ. ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೊಕೆ ಸವಾಲ್ ಹಾಕಿದ್ದೇನೆ. ಆದರೆ ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಚರ್ಚೆ ಮಾಡೋಣ ಎನ್ನುತ್ತಾರೆ. ಜನತಾ ನ್ಯಾಯಾಲಯದ ಮುಂದೆ ಚರ್ಚೆ ಮಾಡೋಕ್ಕೆ ಯಾಕೆ ಭಯ. ಅವರು ಹೇಳಿದ್ದು ಸತ್ಯ ಇರೋದಾದ್ರೆ ಜನರ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಣ ಅದಕ್ಕೆ ಯಾಕೆ ಭಯ ಎಂದು ಸವಾಲ್ ಹಾಕಿದರು.
ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯದ ಪರವಾಗಿದೆ. ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಅನುದಾನ ಹೆಚ್ಚಿದೆ ಅಂತಾ ಹೇಳೋ ಬಸವರಾಜ ಬೊಮ್ಮಾಯಿ, ಒಬ್ಬ ಪೆದ್ದರ ರೀತಿ ಮಾತನಾಡುತ್ತಾರೆ ಎಂದರು.ಸಿದ್ದರಾಮಯ್ಯ ಲಿಂಗಾಯತ ಸ್ವಾಮೀಜಿಗಳನ್ನು ಅವಮಾನಿದ್ದಾರೆ ಎನ್ನುವ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರದ್ದು ಸುಳ್ಳು ಟ್ವಿಟ್ ಮಾಡೋದೆ ಕಸುಬಾಗಿದೆ. ನಾನು ಸ್ವಾಮೀಜಿಗಳ ಬಗ್ಗೆ ಮಾತನಾಡೋಕ್ಕೆ ಹೋಗಿಲ್ಲ ಎಂದರು.
PublicNext
27/10/2021 02:25 pm