ಹುಬ್ಬಳ್ಳಿ: ಉಪ ಚುನಾವಣೆ ನಮಗೆ ಇರುವ ವರದಿ ಪ್ರಕಾರ ಎರಡು ಕಡೆ ಒಳ್ಳೆಯ ವಾತಾವರಣ ಇದೆ, ಕಾಂಗ್ರೆಸ್ ಗೆ ಎರಡು ಕಡೆ ಬಹುಮತ ಸಿಗುವ ವಿಶ್ವಾಸ ಇದೆ. ಸಿಂದಗಿಯಲ್ಲಿ ಎರಡು ದಿನ ಇದ್ದೆ, ಇವತ್ತು ಕೊನೆಯ ದಿನದ ಪ್ರಚಾರ ಹೀಗಾಗಿ ಹಾನಗಲ್ ಗೆ ಬಂದಿದ್ದೇನೆ, ಇಲ್ಲಿಯೂ ಗೆಲ್ಲುವ ಸಾಧ್ಯತೆಯಿದೆ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸುವುದು ಖಚಿತ, ರಾಜಕೀಯ ಗೊಂದಲದಲ್ಲಿ ವ್ಯಯಕ್ತಿಕ ನಿಂದನೆಗಳು ಕೇಳಿ ಬರುತ್ತಿದ್ದು ಅದರ ಬಗ್ಗೆ ನಾನು ಮಾತನಾಡಲ್ಲ, ನಾನು ನಂಬಿದ್ದು ಅಭಿವೃದ್ಧಿ ನಮ್ಮ ವಿಚಾರದಾರೆ ಹಾಗೂ ಚುನಾವಣೆ ನಮ್ಮ ಕೆಲಸದ ಮೇಲೆ ನಡೆಯಬೇಕು, ಕಾಂಗ್ರೆಸ್ ಸರ್ಕಾರ ಏನೇನೂ ಕೆಲಸ ಮಾಡಿದೆ ಅನ್ನೋದನ್ನ ಹೇಳಬೇಕು, ವ್ಯಯಕ್ತಿಕ ನಿಂದನೆ ಮಾಡೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ತಿವಿದರು.
ಇನ್ನೂ ನಿರುದ್ಯೋಗ ಜಾಸ್ತಿಯಾಗಿದೆ, ಅದರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು ಮೋದಿ 7 ವರ್ಷದಲ್ಲಿ 15 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು, ಆದರೆ ಇರುವ ಉದ್ಯೋಗ ಕಳೆದುಕೊಂಡಿದ್ದಾರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಳಿ ಕಾಲಿ ಹುದ್ದೆಗಳಿವೆ, ಸಾಕಷ್ಟು ಹುದ್ದೆಗಳಿವೆ, ಅವುಗಳನ್ನು ತುಂಬಿದ್ರೆ, 62 ಲಕ್ಷ ಉದ್ಯೋಗ ನೀಡಬಹುದು ಎಂದರು.
ಅದಾನಿ, ಅಂಬಾನಿ ಅಂತವರಿಗೆ ಸರ್ಕಾರದ ಆಸ್ತಿ ಲೀಸ್ ಕೊಡ್ತಿದಾರೆ, ದೇಶದ ರೈತರ ಮೇಲೆ ಎಷ್ಟು ದೌರ್ಜನ್ಯ ನಡೆದಿದೆ,ಮಿನಿಸ್ಟರ್ ಮಗ ಮೂರ್ನಾಲ್ಕು ಗಾಡಿ ತೆಗೆದುಕೊಂಡು ಹೋಗಿ ಕೊಲೆ ಮಾಡಿದ್ದಾನ ಅಲ್ಲದೇ ಅವನು ಡೆಂಗ್ಯೂ ಅಂತಾ ಆಸ್ಪತ್ರೆಯಲ್ಲಿದ್ದಾನೆ, ಅವನ ತಂದೆ ರಾಜೀನಾಮೆ ನೀಡಿಲ್ಲ, ರೈತರು ಗೊಬ್ಬರಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ, ಸರ್ಕಾರ 1955 ರಲ್ಲಿ ಅವಶ್ಯಕ ವಸ್ತುಗಳ ದಾಸ್ತಾನು ಮಾಡಬಾರದು ಅಂತಾ ಕಾಯಿದೆ ತಂದಿದೆ, ಶ್ರೀಮಂತರು, ದುಡ್ಡು ಇದ್ದವರು ದಾಸ್ತಾನು ಮಾಡುತ್ತಿದ್ದಾರೆ,ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಏನು ಮಾಡಿದರೂ ನಡೆಯುತ್ತದೆ ಅನ್ನೋ ಮನೋಭಾವನೆ ಮೂಡಿದೆ ದಲಿತರ ಮೇಲೆ ದೌರ್ಜನ್ಯ ಮಾಡಿದರು, ಡಿಸೇಲ್, ಪೆಟ್ರೋಲ್ ದರ ಗಗನಕ್ಕೇರಿದೆ
ಬಿಜೆಪಿಗರು ತೈಲ್ ಬೆಲೆ ಏರಿದಾಗ ಬೀದಿಗೆ ಬರುತ್ತಿದ್ದರು,ಇದೀಗ ಎಲ್ಲಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರ ಇದ್ರೆ ಬಾಯಿಗೆ ಬಂದಾಗೆ ಮಾತನಾಡುತ್ತಾರೆ,ಜನರು ಮತ ಕೊಡುತ್ತಾರೆ ಅಂತಾ ಏನೇನೋ ಮಾಡ್ತಿದಾರೆ,ಸಮಯ ಬಂದಾಗ ಪ್ರತ್ಯುತ್ತರ ನೀಡುತ್ತಾರೆ,ಹಿಟ್ಲರ್ ರೀತಿಯ ಆಡಳಿತ ದೇಶದಲ್ಲಿ ನಡೆಯುತ್ತಿದೆ,ರಾಜ್ಯಕ್ಕೆ ಜಿಎಸ್.ಟಿ 20 ಸಾವಿರ ಕೋಟಿಗೂ ಅಧಿಕ ಹಣ ಬರಬೇಕು,ಅದನ್ನು ಯಾರು ಕೇಳುವವರು ಇಲ್ಲ ಜನರಿಂದ ಸುಲಿಗೆ ಮಾಡಿದ ಹಣ ಸಮಯಕ್ಕೆ ಸರಿಯಾಗಿ ಬರಬೇಕು,ಅದು ಬರದೇ ಇದ್ದರೆ ಯಾವ ರೀತಿಯ ಅಭಿವೃದ್ಧಿ ಆಗುತ್ತದೆ
ರಾಜ್ಯ ಸರ್ಕಾರಕ್ಕೆ ಖರ್ಗೆ ಪ್ರಶ್ನೆ
ಉಪಚುನಾವಣೆಯಲ್ಲಿ ಹಣ ದ ಹೊಳೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿ,ಅಮಿತ್ ಶಾ ಅವರಿಗೆ ಎಲ್ಲ ಗೊತ್ತಿದೆಇಂತಹ ಚುನಾವಣೆ ಬಂದ್ರೆ ಇಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಹೇಗೆ ಬಳಸಿಕೊಳ್ಳಬೇಕು ಅನ್ನೋದು ಗೊತ್ತಿದೆ,ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಾರೆ ಎಂದುಎ ಕಿಡಿ ಕಾರಿದರು.
ಏರ್ಪೋರ್ಟ್ ಖಾಸಗಿ ವಿಚಾರ
ಇನ್ಸುರೆನ್ಸ್ ಕಂಪನಿ ಸುರಕ್ಷಿತ ಉದ್ಯೋಗಗಳು ಬೇರೆಯವರಯ ಕಡೆ ಹೋಗುತ್ತಿದೆ ಅದಾನಿ ಎರ್ಪೋರ್ಟ್ ನಲ್ಲಿ 25 ಸಾವಿರ ಕೋಟಿ ಡ್ರಗ್ಸ್ ಸಿಕ್ಕಿದೆ,ಅವರ ಮೇಲೆ ಕ್ರಮ ಕೈಗೊಂಡಿಲ್ಲ,ಸಬ್ ಕಾ ಸಾಥ್ ಸಬ್ ಕಾ ವಿಕಾಸ ಅಂತಾ ಹೇಳಿಕೊಂಡು ಬಂದ್ರು,ಆದರೆ ಅವರ ಬಗ್ಗೆ ಯಾವುದೇ ವಿಚಾರ ಮಾಡುತ್ತಿಲ್ಲ,ಸಬ್ ಕಾ ಸಾತ್ ಅನ್ನೋದು ಸತ್ಯಾನಾಶ ಆಗಿದೆ.ಇನ್ನೂ ರಾಹುಯ ಗಾಂಧಿ, ಸೋನಿಯಾ ಗಾಂಧಿ ನಮ್ಮ ಅಧ್ಯಕ್ಷರು ರಾಹುಲ್ ಗಾಂಧಿಯೇ ಮುಂದೆ ಅಧ್ಯಕ್ಷರಾಗುತ್ತಾರೆ ಎಂದರು.
PublicNext
27/10/2021 12:59 pm