ವಿಧಾನಸಭೆ ಚುನಾವಣೆ ಹೊಸಿಲಲ್ಲಿರುವ ಪಂಜಾಬ್ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆಂತರಿಕ ಭಿನ್ನಮತದಿಂದ ಸತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ನ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಅಧಿಕೃತವಾಗಿ ಹೊಸ ಪಕ್ಷವೊಂದನ್ನು ಘೋಷಣೆ ಮಾಡಿದ್ದಾರೆ.
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಯಾಪ್ಟನ್ ನಡೆ ಏನು ಎನ್ನೋದರ ಬಗ್ಗೆ ಸಾಕಷ್ಟು ಚರ್ಚೆಗಳು ಹೆಚ್ಚಾದ ಬೆನ್ನಲ್ಲೇ ಕ್ಯಾ. ಅಮರೀಂದರ್ ಸಿಂಗ್ ಇಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ನಾನು ಹೊಸ ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಸಿಕ್ಕ ಬಳಿಕ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಘೋಷಿಸುತ್ತೇನೆ. ಈ ಸಂಬಂಧ ನಮ್ಮ ವಕೀಲರು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪಂಜಾಬ್ ಸಿಎಂ ಆಗಿ ನಾನು ಸಾಧಿಸಿದ ಸಾಧನೆಗಳ ಪಟ್ಟಿ ಇದೆ. ಭದ್ರತಾ ಕ್ರಮಗಳ ಬಗ್ಗೆ ನನ್ನನ್ನು ಅಪಹಾಸ್ಯ ಮಾಡಲಾಗಿದೆ. ಆದರೆ ನಾನೊಬ್ಬ ಯೋಧ. ತರಬೇತಿ ಅವಧಿಯಿಂದ ನಿವೃತ್ತಿಯವರೆಗೆ ನಾನು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಭದ್ರತೆಯ ಮೂಲಭೂತ ಅವಶ್ಯಕತೆಗಳ ಬಗ್ಗೆ ನಾನು ಚೆನ್ನಾಗಿಯೇ ತಿಳಿದಿದ್ದೇನೆ ಎಂದು ಹೇಳಿದ್ದಾರೆ.
PublicNext
27/10/2021 12:40 pm