ವಿಜಯಪುರ: ಮತದಾರರು ತನ್ನ ನೋವನ್ನು ಹೇಳಿಕೊಳ್ಳಲು ಒಂದು ದೊಡ್ಡ ಅವಕಾಶ ಉಪಚುನಾವಣೆ ಮೂಲಕ ಸಿಕ್ಕಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಪಿಕ್ ಪಾಕೆಟ್ ನಡೆಯುತ್ತಿದೆ. ರೈತರ ಗೊಬ್ಬರ ಬ್ಲಾಕ್ ಮಾರ್ಕೆಟ್ ಪಾಲಾಗುತ್ತಿದೆ. ಈ ಎಲ್ಲ ನೋವನ್ನು ನೆನೆಸಿಕೊಂಡು ಜನ ಮತ ಹಾಕುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸಿಂದಗಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಮತಗಟ್ಟೆಗಳಿಗೆ ಹೋದಾಗ ಅದೆಲ್ಲ ನೋವನ್ನು ನೆನೆಸಿಕೊಂಡು ಮತ ಹಾಕುತ್ತಾರೆ. ಕಾಂಗ್ರೆಸ್ ಪಕ್ಷದವರು ನಾವು ಯಾವುದೇ ಜಾತಿಯ ಬಗ್ಗೆ ಮಾತಾಡುತ್ತಿಲ್ಲ. ನೀತಿಯ ಬಗ್ಗೆ ಮಾತನಾಡುತ್ತೇವೆ. ಕೆಲ ಸಮುದಾಯದ ಮುಖಂಡರು ನಾವು ನಿಮ್ಮ ಸಮುದಾಯದೊಟ್ಟಿಗೆ ಇದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
26/10/2021 08:21 pm