ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಮರೇ ಕಾಂಗ್ರೆಸ್ ಬಿಟ್ಟು ಬನ್ನಿ: ಗೋವಿಂದ್ ಕಾರಜೋಳ ಸಲಹೆ

ವಿಜಯಪುರ: ಸ್ವಾತಂತ್ರ್ಯದ ನಂತರದಿಂದಲೂ ದೇಶದ ಮುಸ್ಲಿಮರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಆದ್ರೆ ಕಾಂಗ್ರೆಸ್‌ನವರು ಮುಸ್ಲಿಮರನ್ನು ಬರೀ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್‌ ಬಿಟ್ಟು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.

ಸಿಂದಗಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೇಲೆ ಕುರುಡು ನಂಬಿಕೆ ಇಟ್ಟು ನೀವು ಅನಾಥರಾಗಿದ್ದೀರಿ. ನೀವೆಲ್ಲ ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಬನ್ನಿ. ದೇಶದ ಅಭಿವೃದ್ಧಿಗೆ ಒತ್ತು ಕೊಡುವದು ಬಿಜೆಪಿ ಮಾತ್ರ. ಮುಸ್ಲಿಮಮರ ಅಭಿವೃದ್ಧಿ ಕಾಂಗ್ರೆಸ್‌ನಿಂದ ಆಗುವುದಿಲ್ಲ. ಮುದ್ರಾ ಯೋಜನೆ ಪ್ರಾರಂಭ ಮಾಡಿದ್ದು ಯಾರಿಗಾಗಿ? ರಾಜೀವ್ ಗಾಂಧಿ ಅವರ ಆಪ್ತ ಆರೀಫ್ ಅಹ್ಮದ್ ಖಾನ್ ಅವರನ್ನು ಇಂದು ಕೇರಳದ ಗವರ್ನರ್ ಅನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ. ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಿಮ್ಮ ಸಮುದಾಯದ ಅಭಿವೃದ್ಧಿಗಾಗಿ ನೀವು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಗೋವಿಂದ್ ಕಾರಜೋಳ ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

26/10/2021 08:09 pm

Cinque Terre

116.82 K

Cinque Terre

22

ಸಂಬಂಧಿತ ಸುದ್ದಿ