ಹಾಸನ: ಶಾಸಕ ಜಮೀರ್ ಅಹಮ್ಮದ್ ಅವರಿಗೆ ಕಾಂಗ್ರೆಸ್ ಸರ್ಕಾರ ಇರುವುದು ಇಷ್ಟ ಇರಲಿಲ್ಲ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆದಾಗುತ್ತದೆ. ನೀನು ಬಿಜೆಪಿಗೆ ಹೋಗುವಂತೆ ಜಮೀರ್ ಹೇಳಿದ್ದರು ಎಂದು ಸಚಿವ ಕೆ. ಗೋಪಾಲಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಮೀರ್ ಒಳ್ಳೆ ಸ್ನೇಹಿತರು. ನಾನು ಬಿಜೆಪಿಯಲ್ಲೇ ಇರ್ತಿನಿ, ನನ್ನ ಮಕ್ಕಳಿಗೂ ಇದೇ ಮಾತು ಹೇಳುತ್ತೇನೆ. ನಾನು ಇಲ್ಲಿ ಸಚಿವನಾಗಿದ್ದೇನೆ, ಬಿಜೆಪಿ ಪಕ್ಷ ನನಗೆ ಎಲ್ಲಾ ಕೊಟ್ಟಿದೆ ಎಂದರು. ಈ ವೇಳೆ, 'ಜಮೀರ್ ಬಿಜೆಪಿಗೆ ಬರ್ತಾರಾ?' ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ. ಗೋಪಾಲಯ್ಯ ಅವರು, ಇದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಇಂದು ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಹೇರಿರುವ ನಿಷೇಧವನ್ನು ಕೈಬಿಡಲಾಗುವುದು. ಈ ಮೂಲಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
PublicNext
26/10/2021 05:59 pm