ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಗೆ ಬಿಜೆಪಿ ಸದಸ್ಯರು ಬೀಗ ಜಡಿದಿರುವ ಘಟನೆ ನಡೆದಿದೆ.
ಕಲಕೇರಿ ಗ್ರಾ.ಪಂ ಅಧ್ಯ ಕ್ಷ ಹಾಗೂ ಪಿಡಿಓ ದುರಾಡಳಿತ ಮಾಡುತ್ತಿರುವುದಲ್ಲದೇ, ಪ್ರತಿಯೊಂದು ಕೆಲಸಕ್ಕೂ ಅಧ್ಯಕ್ಷರ ಮನೆ ಬಾಗಿಲಿಗೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹಾಗು ಪಿಡಿಓ ಕಚೇರಿಗೆ ಬಾರದೇ ಕೂತಲ್ಲೇ ಕೆಲಸ ನಿರ್ವಹಣೆ ಮಾಡುತ್ತಿರುವದನ್ನು ಕಂಡು ಆಕ್ರೋಶಿತರಾದ ಬಿಜೆಪಿ ಸದಸ್ಯರು ಏಕಾಏಕಿ ಕಚೇರಿಗೆ ಬೀಗಹಾಕಿದ್ದಾರೆ.ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
26/10/2021 05:41 pm