ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಾಲೂಕಿನ ಸಮಸ್ಯೆಗೆ ತಹಶೀಲ್ದಾರ ಉತ್ತರ ಕೇಳಿದ ವಿವಿಧ ಸಂಘಟನೆಗಳು !

ಕುಂದಗೋಳ : ಕಳೆದ ಹಲವಾರು ದಿನಗಳಿಂದ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡಿದ ಶಿರೂರು ಬ್ರಿಡ್ಜ್ ಸಮಸ್ಯೆ ಹಾಗೂ ಭೂ ಮಾಪನ ಇಲಾಖೆ ಸರ್ವರ್ ಸಮಸ್ಯೆ ಸೇರಿದಂತೆ ತಾಲೂಕಿನ ವೃದ್ಧರಿಗೆ ಅನುಕೂಲವಾದ ಸಂಧ್ಯಾ ಸುರಕ್ಷಾ ಪಿಂಚಣಿ ಕೆಲಸ ಮಾಡಿಕೊಡಲು ವಿನಾಕಾರಣ ಕಾಲಹರಣ ಮಾಡುತ್ತಿರುವ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ತನೆ ವಿರುದ್ಧ ಕರವೇ ಮತ್ತು ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.

ಇಂದು ವಿವಿಧ ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ಸೇರಿಕೊಂಡು ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆ ಹಾಗೂ ಬೆಳೆ ವಿಮೆ ಬಿಡುಗಡೆ ಮಾಡಿ ರೈತರು ಕಷ್ಟ ಪರಿಸುವಂತೆ ಕೋರಿದರು.

ಮನವಿ ಸ್ವೀಕರಿಸಿ ಮಾತಾನಾಡಿದ ತಹಶೀಲ್ದಾರ ಸಾರ್ವಜನಿಕರ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ‌ ಸಿಬ್ಬಂದಿಗಳ ವರ್ತನೆ ಹಾಗೂ ಕಾರ್ಯ ವೈಖರಿ ಜನರಿಗೆ ತೃಪ್ತಿಯಾಗದಿದ್ದಲ್ಲಿ, ನನ್ನ ಗಮನಕ್ಕೆ ತನ್ನಿ ಎಲ್ಲರೂ ಒಟ್ಟಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದರು.

Edited By : Manjunath H D
PublicNext

PublicNext

25/10/2021 03:09 pm

Cinque Terre

24.14 K

Cinque Terre

0

ಸಂಬಂಧಿತ ಸುದ್ದಿ