ಕಾಂಗ್ರೆಸ್ ಪಕ್ಷ ಅಂದ್ರೆ ಮುಸ್ಲಿಂ ಪಕ್ಷ. ಮುಸ್ಲಿಂ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ. ಈ ಒಂದು ಮಾತು ಈಗಲೂ ಇದೆ.ಆದರೆ ಇಲ್ಲೊಬ್ಬ ಗಡ್ಡಧಾರಿ ಕಾಂಗ್ರೆಸ್ ಪಕ್ಷವನ್ನ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಅದರಲ್ಲೂ ಸಿದ್ಧರಾಮಯ್ಯನವರ ಆಳ್ವಿಕೆಯನ್ನ ಕಟುವಾಗಿಯೇ ವಿಶ್ಲೇಷಿಸಿದ್ದಾರೆ. ಯಾರದು..? ನೀವೇ ನೋಡಿ.
ಅಲ್ಪ ಸಂಖ್ಯಾತ ಮುಸ್ಲಿಂ ವ್ಯಕ್ತಿಯೊಬ್ಬರು ವೀಡಿಯೋ ಮಾಡಿದ್ದಾರೆ. ಈ ವೀಡಿಯೋದಲ್ಲಿ ಇಡೀ ಕಾಂಗ್ರೆಸ್ ಪಕ್ಷವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ಧರಾಮಯ್ಯನವರ ಆಳ್ವಿಕೆಯನ್ನಂತೂ ಬಲವಾಗಿಯೇ ಟೀಕಿಸಿದ್ದಾರೆ. 39 ಸಾವಿರ ಕೋಟಿ ದುಡ್ಡನ್ನ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಇಡಲಾಗಿದೆ ಅಂತಲೇ ಹೇಳಿದ್ದೀರಿ ? ಎಲ್ಲಿ ಆಗಿದೆ ಅಲ್ಪ ಸಂಖ್ಯಾತರ ಉದ್ಧಾರ. ಕೊಡಿ ನೋಡೋಣ ಆ ಲೆಕ್ಕ ? ಅಂತಲೇ ಕೇಳಿದ್ದಾರೆ.
ಆದರೂ ನಮ್ಮವರು ಬಿಜೆಪಿಯಿಂದ ದುಡ್ಡು ಪಡೆಯುತ್ತಾರೆ. ಬಿಜೆಪಿಗೆ ವೋಟು ಹಾಕದೇನೇ ಕಾಂಗ್ರೆಸ್ ಗೆ ವೋಟು ಹಾಕ್ತಾರೆ. ಇಂತಹ ಸ್ಥಿತಿಯಲ್ಲಿ ಬಿಜೆಪಿಯನ್ನ ಯಾಕೆ ಬೈಯೋದು ಅಂತಲೇ ಬಿಜೆಪಿ ಪರವೇ ಮಾತನಾಡಿದ್ದಾರೆ ಈ ಮುಸ್ಲಿಂ ವ್ಯಕ್ತಿ. ಹೀಗೆ ಮಾತನಾಡಿದ ಈ ವ್ಯಕ್ತಿಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
PublicNext
25/10/2021 02:09 pm