ತುಮಕೂರು: ಭಜರಂಗ ದಳ ಕಾರ್ಯಕರ್ತನ ಮೇಲೆ ಆದ ಅಟ್ಯಾಕ್ ಅನ್ನ ಖಂಡಿಸಿದ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈಗ ಸರ್ಕಾರಕ್ಕೆ ಒಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಜರಂಗ ದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿತ್ತು. ಅದನ್ನ ಖಂಡಿಸಿ ಇಡೀ ತುಮಕೂರು ಬಂದ್ ಆಗಿತ್ತು.ಇಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್,ಮಂಜು ಭಾರ್ಗವ ಭೇಟಿ ಮಾಡಿದ್ದಾರೆ. ಭೇಟಿ ಮಾಡಿದ ಬಳಿಕ ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.
ಮಂಜು ಭಾರ್ಗವ ಗೋರಕ್ಷಣೆ ,ಲವ್ ಜಿಹಾದ್ ನಿಂದ ಹಿಂದೂ ಹುಡುಗಿರ ರಕ್ಷಣೆ ಮತ್ತು ಅಕ್ರಮ ಕಸಾಯಿಖಾನೆ ವಿರುದ್ಧ ಹೋರಾಡಿದ್ದಾರೆ. ಅದರ ಫಲ ಇವತ್ತು ಅಟ್ಯಾಕ್ ಆಗಿದೆ. ಕಾರ್ಪೋರೇಟರ್ ಪತಿ ಇಸ್ಮಾಯಿಲ್ ಅನ್ನೋರು ಅಕ್ರಮವಾಗಿಯೇ ಕಸಾಯಿಖಾನೆ ನಡೆಸುತ್ತಿದ್ದಾರೆ. ಅದಕ್ಕೇನೆ ತೊಂದರೆ ಆಗಿದೆ ಅಂತಲೆ ಮಂಜು ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಇದು ಹೀಗೆ ಮುಂದುವರೆದರೆ, ಇಡೀ ರಾಜ್ಯದಿಂದ ಲಕ್ಷ ಲಕ್ಷ ಜನ ಬಂದು ಹೋರಾಟ ಮಾಡುತ್ತಾರೆ. ಎಚ್ಚರ ಎಚ್ಚರ ಎಚ್ಚರ. ಅಕ್ರಮ ಕಸಾಯಿಖಾನೆಗಳನ್ನ ನೀವೇ ಮುಚ್ಚುತಿರೋ ಇಲ್ಲವೇ ನಾವೇ ಬಂದು ಮುಚ್ಚೋನವೇ ಎಂದು ಸರ್ಕಾರಕ್ಕೂ ಖಡಕ್ ಆಗಿಯೇ ಪ್ರಶ್ನೆ ಮಾಡಿ, ಇಡೀ ಹಲ್ಲೆ ಪ್ರಕರಣವನ್ನ ಖಂಡಿಸಿದ್ದಾರೆ ಪ್ರಮೋದ್ ಮುತಾಲಿಕ್. ಇನ್ನೇನಾದ್ರೂ ಮತ್ತೆ ಹಿಂದೂ ಕಾರ್ಯಕರ್ತರ ಮೇಲೆ ಅಟ್ಯಾಕ್ ಆದರೆ, ಬಿಜೆಪಿ ಎಂ.ಎಲ್.ಎ ಹಾಗೂ ಎಂಪಿಗಳ ಮೇಲೆನೆ ನಾವು ಅಟ್ಯಾಕ್ ಮಾಡ್ತೀವಿ ಅಂತಲೂ ಹೇಳಿಕೆ ಕೊಟ್ಟಿದಾರೆ.
PublicNext
24/10/2021 07:57 pm