ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಬೊಮ್ಮಾಯಿ ಎಂದಾದರೂ ಕುರಿ ಕಾದಿದ್ದಾನಾ? ಕಂಬಳಿ ಹಾಕಲು ಯೋಗ್ಯತೆ ಬೇಕು: ಸಿದ್ದರಾಮಯ್ಯ ವಾಗ್ದಾಳಿ

ವಿಜಯಪುರ: ಸಿಂದಗಿ ಉಪಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಮೇಲೆ ಒಂದೊಂದಾಗಿ ಮಾತಿನ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ.

ಇಂದು ಕೂಡ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಂಬಳಿ ಹಾಕೋದಕ್ಕೂ ಯೋಗ್ಯತೆ ಬೇಕು. ಬೊಮ್ಮಾಯಿ ಎಂದಾದರೂ ಕುರಿ ಕಾದಿದ್ದಾರಾ? ಅವರು ಎಂದು ಕುರಿ ಕಾದಿಲ್ಲ. ನಾನು ಕುರಿ ಕಾದಿದ್ದೇನೆ. ಕಾಗಿನೆಲೆ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಏನೇನೂ ಇಲ್ಲ. ಕನಕಪೀಠ ಉದ್ಘಾಟನೆಗೆ ಬಿಜೆಪಿಯವರು ಬಂದೇ ಇಲ್ಲ. ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಮಾಡಿದ್ದರು. ಆದ್ರೆ ಈಗ ರಾಯಣ್ಣ ಬ್ರಿಗೇಡ್ ಏನಾಯ್ತು? ಎಲ್ಲಿಗೆ ಹೋಯ್ತು? ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ಪಕ್ಷ ಈ ಚುನಾವಣೆಯಲ್ಲಿದೆ. ಆದ್ರೆ ಸ್ಪರ್ಧೆಯಲ್ಲಿಲ್ಲ. ನೇರ ಚುನಾವಣೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿಗೆ. ಜೆಡಿಎಸ್ ಚುನಾವಣೆಯಲ್ಲಿದೆ ಆದರೆ ಸ್ಪರ್ಧೆಯಲ್ಲಿಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ನನ್ನ ಬಗ್ಗೆ ಬಾಣ ಬಿಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ನನ್ನ ಕಂಡರೆ ಭಯ ಇದೆ. ಯಾರಿಗೆ ಶಕ್ತಿ ಇದೆಯೋ ಅವರ ಬಗ್ಗೆ ಉಳಿದವರಿಗೆ ಭಯ ಹೆಚ್ಚು. ಇದು ಜನರೇ ನನಗೆ ಕೊಟ್ಟ ಶಕ್ತಿ. ಸಿದ್ದರಾಮಯ್ಯ ಅವರನ್ನು ಮುಗಿಸಿದರೆ ಕಾಂಗ್ರೆಸ್ ಮುಗಿದಂಗೆ ಎಂದು ಉಳಿದವರು ಅಂದುಕೊಂಡಿದ್ದಾರೆ. ಆದರೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನರ ಶಕ್ತಿ ಇರೋವರೆಗೂ ಅದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ಮೇಲೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಆ ಪಕ್ಷ ಜೆಡಿಎಸ್ ಬದಲಾಗಿ ಜೆಡಿಎಫ್ ಎಂದು ಬದಲಾಯಿಸಿಕೊಳ್ಳಬೇಕು. ಎಫ್ ಎಂದರೆ ಫ್ಯಾಮಿಲಿ ಪಕ್ಷ ಎಂದು ಕರೆಯಬೇಕು. ಅದು ಬಿಜೆಪಿಯ ಬೀ ಟಿಂ ಆಗಿದೆ.

ಬಿಜೆಪಿ ಯಾವತ್ತಿಗೂ ಹಿಂದುಳಿದ ವರ್ಗದ ನಾಯಕರನ್ನು ಬೆಳೆಸಿಲ್ಲ. ಹಿಂದುಳಿದ ಜಾತಿಯವರಿಗೆ ಮೀಸಲಾತಿ ನೀಡಿರುವವರು ದೇವರಾಜ್ ಅರಸು. ಎಂಸಿ ಮನಗೂಳಿ ಅವರು ಐದು ವರ್ಷಕ್ಕೆ ಆಯ್ಕೆಯಾಗಿದ್ದರು. ಇದೀಗ ಉಳಿದ ಅವಧಿಗೆ ಚುನಾವಣೆ ನಡೆಯುತ್ತಿದೆ. ಎಂಸಿ ಮನಗೂಳಿ ಸಾಯೋದಕ್ಕಿಂತ ನಮ್ಮ ಪಕ್ಷಕ್ಕೆ ಅವರ ಮನಗನ್ನು ಕರೆದುಕೊಳ್ಳುವಂತೆ ಕೇಳಿ ಕೊಂಡಿದ್ದರು. ಅವರ ಆಸೆಯಂತೆ ಅಶೋಕ್ ಮನಗೂಳಿ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲಾಗಿದೆ. ಸಿಂದಗಿಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವುದು ಮನಗೂಳಿ ಅಲ್ಲ. ಬದಲಾಗಿ ನಾನೇ ಸ್ಪರ್ಧಿಸಿದ್ದೇನೆ ಎಂದುಕೊಳ್ಳಿ. ಮನಗೂಳಿಗೆ ಮತ ಹಾಕಿದರೆ ಅದು ಸಿದ್ದರಾಮಯ್ಯಗೆ ಮತ ಹಾಕಿದಂತೆ ಎಂದು ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದರು.

Edited By : Shivu K
PublicNext

PublicNext

24/10/2021 07:20 pm

Cinque Terre

56.27 K

Cinque Terre

23

ಸಂಬಂಧಿತ ಸುದ್ದಿ