ವಿಜಯಪುರ: ಕುಮಾರಸ್ವಾಮಿಗೆ ಒಂದೇ ಟಾರ್ಗೆಟ್ ಇದೆ, ಅಲ್ಪ ಸಂಖ್ಯಾತರನ್ನು ಬಲಿ ಮಾಡೋದು, ಅವರನ್ನು ಮುಗಿಸೋದು. ಆರ್‌ಎಸ್‌ಎಸ್‌ಗೆ ಬೈದರೆ ಮುಸ್ಲಿಮರಿಗೆ ಖುಷಿಯಾಗಿ ಅವರ ಮತಗಳು ಜೆಡಿಎಸ್‌ಗೆ ಬರುತ್ತದೆಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಆದ್ರೆ ಮುಸ್ಲಿಮರು ಹಾಗಲ್ಲ. ಅವರು ರಾಜಕೀಯವಾಗಿ ಜಾಣರಿದ್ದಾರೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಸಿಂದಗಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಹೊತ್ತಿನಲ್ಲಿ ಕುಮಾರಸ್ವಾಮಿ ಅಲ್ಪ ಸಂಖ್ಯಾತರ ಜೊತೆ ಸಿದ್ದರಾಮಯ್ಯ ಅವರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಹೋದರೆ ನಮ್ಮದೇ ಆಟ ನಡೆಯುತ್ತದೆ ಎಂದು ಕುಮಾರಸ್ವಾಮಿ ಅಂದು ಕೊಂಡಿದ್ದಾರೆ. ಆದ್ರೆ ಇದು ವಾಸ್ತವ ಅಲ್ಲ. ಕುಮಾರಸ್ವಾಮಿ ಎಷ್ಟು ಜನರನ್ನು ಎಂಎಲ್‌ಎ ಮಾಡಿದ್ದಾರೆ? ಎಷ್ಟು ಜನರನ್ನು ಮಂತ್ರಿ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತು. ನಾನು ಕುಮಾರಸ್ವಾಮಿ ಅವರಿಗೆ ಬಹಳ ಆತ್ಮೀಯನಾಗಿದ್ದೆ. ಆದರೂ ನನಗೆ ವಕ್ಫ್ ಹಜ್ ಖಾತೆ ನೀಡಿದರು ಎಂದ ಜಮೀರ್ ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಕುಮಾರಸ್ವಾಮಿ ಅವರೇ ಅಲ್ಪಸಂಖ್ಯಾತರ ವಿರೋಧಿ. ಹಾನಗಲ್‌ನಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ಬಸವ ಕಲ್ಯಾಣದಲ್ಲೂ ಹೀಗೆ ಮಾಡಿದ್ದರು. ಆದ್ರೆ ಯಾಕೆ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುವುದಿಲ್ಲ, ಉಪ ಚುನಾವಣೆಯಲ್ಲಿ ಮಾತ್ರ ಯಾಕೆ ಅಭ್ಯರ್ಥಿ ಹಾಕುತ್ತೀರಿ? ಎಂದ ಜಮೀರ್, ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದಾರೆ.
PublicNext
24/10/2021 03:59 pm