ದೆಹಲಿ:ಲಾಲು ಪ್ರಸಾದ್ ಯಾದವ್ ಯಾರಿಗೆ ಗೊತ್ತಿಲ್ಲ ಹೇಳಿ. ಬಿಹಾರದ ಲಾಲು ಮಾತು ಮತ್ತು ನಡೆ ಎಲ್ಲವೂ ವಿಶೇಷವೇ. ಆದರೆ ಈಗ ಲಾಲು ಬಹು ದಿನಗಳ ಬಳಿಕ ಮಾಧ್ಯಮಕ್ಕೆ ಮಾತನಾಡಿದಂತಿದೆ, ತಮ್ಮ ಆರ್.ಜೆ.ಡಿ.ಪಕ್ಷ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹೊರ ಬಂದಾಗಿದೆ ಅಂತಲೇ ಹೇಳಿಕೊಂಡಿದ್ದಾರೆ ಲಾಲು.
ಕಾಂಗ್ರೆಸ್ ಜೊತೆಗೆ ಏನ ಅದು ಮೈತ್ರಿ. ಎಲ್ಲವನ್ನೂ ಅವರಿಗೆ ಬಿಟ್ಟುಕೊಡೋದೇ ? ಎಲ್ಲವನ್ನೂ ಅವರಿಗೇ ಬಿಟ್ಟುಕೊಟ್ಟು ಠೇವಣಿ ಕಳೆದುಕೊಳ್ಳುವುದೇ ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿ,ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನ ತಮ್ಮ ಆರ್.ಜೆ.ಡಿ. ಬ್ರೇಕ್ ಮಾಡಿಕೊಂಡ ವಿಚಾರವನ್ನ ಬಹಿರಂಗಪಡಿಸಿದ್ದಾರೆ ಲಾಲು.
PublicNext
24/10/2021 02:51 pm