ಹಾನಗಲ್: ಅನೇಕ ರೋಚಕ ಪ್ರಸಂಗಗಳಿಗೆ ಹಾನಗಲ್ ಉಪಚುನಾವಣೆ ಕದನ ಸಾಕ್ಷಿಯಾಗುತ್ತಿದೆ. ನಡುನಡುವೆ ಅನೇಕ ಪೇಚಿನ, ಪ್ರಸಂಗಗಳು ನಗೆಪಾಟಲಿಗೆ ಈಡಾಗುತ್ತಿದೆ.
ಬಹಿರಂಗ ಪ್ರಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾಡುವ ವೇಳೆ ಪಾನಮತ್ತ ವ್ಯಕ್ತಿಯೊಬ್ಬ ಮೇಲೆದ್ದು ಕಾಂಗ್ರೆಸ್ ಧ್ವಜ ಬೀಸಿದ್ದಾನೆ. ಇದನ್ನು ಕಂಡು ಕೂಡಲೇ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಏಯ್ ಕೂತ್ಕೊ ಅಲ್ಲಿ. ಅದೆಲ್ಲ ಒಂದ್ಸಲ ಸರಿ. ಪದೇ ಪದೇ ಸರಿಯಲ್ಲ. ಬಿಜೆಪಿಯವರು ಕುಡಿಸಿ ಕಳಿಸಿದ್ರಾ? ಆಚೆ ಕಳಿಸಿಬಿಡ್ತೀನಿ ನೋಡು ಎಂದಿದ್ದಾರೆ.
ಇದೆಲ್ಲ ಆದ ಮೇಲೆ ಸಿದ್ದರಾಮಯ್ಯ ಮಾತು ಆರಂಭಿಸಿದ್ದಾರೆ. ಹೌದು ಹುಲಿಯಾ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಮತ್ತಷ್ಟು ಅಸಮಧಾನಿತರಾದ ಸಿದ್ದರಾಮಯ್ಯ ಏಯ್ ನಡಿಯಯ್ಯ ಆಚ್ಗೆ ಎಂದು ಮತ್ತೆ ಮಾತು ಮುಂದುವರೆಸಿದ್ದಾರೆ.
PublicNext
23/10/2021 10:42 pm