ಹಾವೇರಿ: ಯಡಿಯೂರಪ್ಪ ಅವರನ್ನು ಹೆದರಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿತ್ತು. ಈಗ ಮತ್ತೆ ಅವರನ್ನು ಹೆದರಿಸಿ ಚುನಾವಣಾ ಪ್ರಚಾರಕ್ಕೆ ಕರೆತರಲಾಗಿದೆ. ಅವರಿಗೆ ಉಪಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಮಯ್ಯ ಹೇಳಿದ್ದಾರೆ.
ಹಾನಗಲ್ ತಾಲೂಕಿನ ಉಪ್ಪುಣಶಿ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿ ಅವರು ಜನರಿಂದ ಓಟ್ ಹಾಕಿಸಿಕೊಂಡು ಬಹುಮತ ಪಡೆದು ಸಿಎಂ ಆಗಿಲ್ಲ. ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ದು ಯಡಿಯೂರಪ್ಪ. ಆದ್ರೆ ಈಗ ಸಿಎಂ ಆಗಿ ಮಜಾ ಮಾಡ್ತಿರೋದು ಮಾತ್ರ ಬೊಮ್ಮಾಯಿ. ತಾವು ಅಕ್ಕಿ ಆಲೂರಿನ ಅಳಿಯ ಎಂದು ಹೇಳಿಕೊಂಡು ಈಗ ಜನರ ಬಳಿ ಮತ ಕೇಳಲು ಬೊಮ್ಮಾಯಿ ಬಂದಿದ್ದಾರೆ. ನನ್ನ ಮಾನ ಉಳಿಸಿ ಎಂದು ಗೋಗರೆಯುತ್ತಿದ್ದಾರೆ. ಆದ್ರೆ ಇಷ್ಟು ದಿನ ಅವರಿಗೆ ಮಾವನ ಮನೆ ನೆನಪಾಗಲಿಲ್ವಾ ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
PublicNext
23/10/2021 09:31 pm