ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕಾಂಗ್ರೆಸಿಗರನ್ನೇ ಫಿನಾಯಿಲ್ ಹಾಕಿ ತೊಳೆಯಬೇಕಾಗಿದೆ: ಸಚಿವ ಅಶ್ವಥ್ ನಾರಾಯಣ್

ಬೈಂದೂರು: ಉಪಚುನಾವಣೆ ಸಂದರ್ಭ ಆಡಳಿತ ,ಪ್ರತಿಪಕ್ಷ ನಾಯಕರುಗಳ ಆರೋಪ ಪ್ರತ್ಯಾರೋಪಗಳು ಎಲ್ಲೆ ಮೀರುತ್ತಿವೆ.ಈ ಮಧ್ಯೆ ಬೈಂದೂರಿನಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ್ ಸುದ್ದಿಗಾರರ ಜೊತೆ ಮಾತಾಡುತ್ತಾ ,ಕಾಂಗ್ರೆಸಿಗರನ್ನೇ ಫಿನಾಯಿಲ್ ಹಾಕಿ ತೊಳೆಯಬೇಕಾಗಿದೆ. ಕಾಂಗ್ರೆಸ್ ದೇಶಕ್ಕೇ ಸಮಸ್ಯೆ.ಅವರದು ಫ್ಯಾಮಿಲಿ ಪಾರ್ಟಿ ,ನಮ್ಮ‌ ಅಧ್ಯಕ್ಷ ನಳಿನ್ ಕುಮಾರ್ ಸರಿಯಾದ ರೀತಿಯಲ್ಲೇ ಕಾಂಗ್ರೆಸ್ ನವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಬೇಡದ ಸಂಸ್ಕೃತಿ ,ಬೇಡದ ವಿಚಾರಗಳು‌ ಮತ್ತು ಆಡಳಿತ ನೀಡಿರುವ ಪಕ್ಷ ಕಾಂಗ್ರೆಸ್.ಅದನ್ನು ನಿರ್ನಾಮ ಮಾಡಲು ಪಣ ತೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಜನಪರವಾದ ಪಕ್ಷ ಎಂದು ಹೇಳಿದ ಸಚಿವರು ,ನಳಿನ್ ಕುಮಾರ್ ಕಾಂಗ್ರೆಸ್ ಪಕ್ಷವನ್ನು ಬಯಲು ಮಾಡುತ್ತಿದ್ದಾರೆ.ಕಾಂಗ್ರೆಸ್ ಈಗ ದೇಶಕ್ಕೆ ಪ್ರಸ್ತುತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Edited By : Manjunath H D
PublicNext

PublicNext

23/10/2021 07:03 pm

Cinque Terre

72.48 K

Cinque Terre

16

ಸಂಬಂಧಿತ ಸುದ್ದಿ