ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ ಕಾರ್ನರ್ ಇಲ್ಲ- ಹೆಚ್ ಡಿ ಕುಮಾರಸ್ವಾಮಿ

ಹುಬ್ಬಳ್ಳಿ: ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ ಕಾರ್ನರ್ ಇಲ್ಲ. ನಮಗೆ ಬಿಜೆಪಿ ಮೇಲೆ‌ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತಿದ್ದೆ, ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ನಗರದ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟಿಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಿಗೆ ಅದನ್ನ ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ. ಬಿಜೆಪಿ ಜೊತೆನೆ 5 ವರ್ಷ ಸರ್ಕಾರ ಮಾಡುತಿದ್ದೆ.2006 ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ.ಅವರ ನಡವಳಿಕೆಯಿಂದ ಮಾಡಿದ್ದು. ನಮ್ಮ ಪಕ್ಷದ ಬಗ್ಗೆ ಬೇರೆ ವಿಷಯ ಇಲ್ಲದೇ ಮಾತು ಎತ್ತಿದರೆ ಒಳ‌ ಒಪ್ಪಂದ ಅಂತಾ ಸಿದ್ದರಾಮಯ್ಯ ಮಾತನಾಡುತಿದ್ದಾರೆ ಎಂದರು.

ಸಿಂದಗಿಯಲ್ಲಿ ಗೆಲುವು ನಮದೆ!

ಸಿಂದಗಿಯಲ್ಲಿ ಚುನಾವಣೆ ಗೆಲ್ತೆವೆ. ಕಳೆದ 5 ದಿನಗಳಿಂದ ಪ್ರಚಾರದಲ್ಲಿ ಭಾಗವಹಿಸಿದ್ದೆನೆ, ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ದೇವೆಗೌಡರ ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತಿದ್ದಾರೆ.ಜನತಾ‌‌ ಪರಿವಾರದ ಸಿ ಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್ ನಲ್ಲಿ ನಾಯಕತ್ವದ ಕೊರತೆ ಇತ್ತು.ಈ ಬಾರಿ ನಾವು ಹಾನಗಲ್ ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೆವೆ.ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡ್ತೆನೆ.

ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್-

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ನ ಸಮಸ್ಯೆ ಇಲ್ಲಾ ಅಂತಾ ಅವರ ಭಾವನೆ ಇರಬಹುದು. ನಾನು ಅವರಿಗೆ ಮನವಿ ಮಾಡ್ತೆನೆ.ಸಿದ್ದರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ‌ ಕೆಲಸ ಮಾಡಬೇಡಿ ಎಂದು ಮನವಿ ಮಾಡ್ತೆನೆ. ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ. ಆದರೆ ನಾನು ಎಲ್ಲ ನಾಯಕರಿಗೂ ಹೇಳ್ತೆನೆ.ಚುನಾವಣೆಯಲ್ಲಿ ಆಗಿರಬಹುದು ಅಥವಾ ಜನಪ್ರತಿನಿಯಾಗಿರಬಹುದು ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ‌ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತಿಮ ಇರಲ್ಲ ಎಂದರು.

Edited By : Manjunath H D
PublicNext

PublicNext

23/10/2021 01:28 pm

Cinque Terre

71.04 K

Cinque Terre

4

ಸಂಬಂಧಿತ ಸುದ್ದಿ