ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅಖಿಲೇಶ್ ಯಾದವ್ ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಚಾನಕ್ಕಾಗಿಯೆ ಭೇಟಿಯಾದ ಇವ್ರು ಪರಸ್ಪರ ಮಂದಹಾಸವನ್ನ ವಿನಿಮಯ ಮಾಡಿಕೊಂಡಿದ್ದಾರೆ. ಅಷ್ಟೆ. ಆದರೆ ಈ ಅಚಾನಕ್ ಭೇಟಿ ಈಗ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆ ಆಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಯಿಂದ ಲಕ್ನೋ ಕಡೆಗೆ ಪ್ರಯಾಣ ಬೆಳೆಸಿದ್ದರು. ಇದೇ ವಿಮಾನದಲ್ಲಿಯೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಪ್ರಯಾಣ ಮಾಡಿದ್ದಾರೆ. ಆದರೆ ಇದು ಪೂರ್ವ ನಿಯೋಜಿತ ಪ್ರಯಾಣ ಅಲ್ಲವೇ ಅಲ್ಲ. ಆಕಸ್ಮಿಕವಾಗಿಯೇ ಭೇಟಿಯಾಗಿದ್ದಾರೆ. ಅಖಿಲೇಶ್ ಮಾಸ್ಕ್ ಧರಿಸಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನ ಕಂಡು ಸ್ಮೈಲ್ ಕೂಡ ಮಾಡಿದ್ದಾರೆ.ಇದು ರಾಜಕೀಯ ವಲಯದಲ್ಲೂ ಚರ್ಚೆ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ ಈ ಭೇಟಿಯ ಒಂದೇ ಒಂದ್ ಫೋಟೋ.
PublicNext
23/10/2021 09:43 am