ಹೊಸದಿಲ್ಲಿ:ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ನಡೆಸುತ್ತಿದೆ. ಆದರೆ ಇದೇ ಮೋರ್ಚಾದಲ್ಲಿದ್ದ ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಅವರನ್ನ ಮೋರ್ಚಾ ಒಂದು ತಿಂಗಳ ಕಾಲ ವಜಾಗೊಳಿಸಿದೆ.
ಮೋರ್ಚಾದ ನಿರ್ಧಾರವನ್ನ ಗೌರವಿಸಿದ ಯೋಗೇಂದ್ರ ಯಾದವ್,ನನ್ನ ಹೋರಾಟವನ್ನ ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.ಆದರೆ, ವಜಾಗೊಳಿಸಲು ಕಾರಣ ಬಲವಾಗಿ ಇದೆ. ಮೋರ್ಚಾದಲ್ಲಿದ್ದ ಯೋಗೇಂದ್ರ ಯಾದವ್, ಲಖೀಂಪುರ ಘಟನೆಯಲ್ಲಿ ಮೃತಪಟ್ಟ
ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಮನೆಗೆ ಹೋಗಿದ್ದರು. ಅಂದಿನಿಂದಲೇ ಯೋಗೇಂದ್ರ ಯಾದವ್ ರನ್ನ ವಜಾಗೊಳಿಸಬೇಕೆಂದು ಒತ್ತಾಯ ಇತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ.ಈ ಶಿಕ್ಷೆಯನ್ನ ಅತೀವ ಸಂತೋಷದಲ್ಲಿಯೇ ಸ್ವೀಕರಿಸುತ್ತೇನೆ ಅಂತಲೂ ಯೋಗೇಂದ್ರ ಯಾದವ್ ಹೇಳಿಕೊಂಡಿದ್ದಾರೆ.
PublicNext
22/10/2021 07:42 pm