ಹಾನಗಲ್:ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಶಾಸಕ ಕೃಷ್ಟ ಬೈರೇಗೌಡ ತುಂಬಾ ಹಳೆ ಶೈಲಿಯಲ್ಲಿಯೇ ಮನೆ-ಮನೆಗೂ ಹೋಗಿ ಪ್ರಚಾರ ಮಾಡಿ ಬಂದಿದ್ದಾರೆ.
ಕೃಷ್ಟ ಬೈರೇಗೌಡರು ಪಾದಯಾತ್ರೆ ಮೂಲಕವೇ ಹಾನಗಲ್ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ನಡೆದುಕೊಂಡೇ ಕಾಂಗ್ರೆಸ್ ಗೆ ಮತವನ್ನ ನೀಡಿ ಅಂತಲೂ ಕೇಳಿಕೊಂಡಿದ್ದಾರೆ.
ಪ್ರಚಾರದ ಈ ಹಳೆ ಪದ್ಧತಿ ತಾರುಣ್ಯದ ತಮ್ಮ ಆ ದಿನಗಳನ್ನೂ ನೆನಪಿಸಿದೆ ಅಂತಲೇ ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲೂ ಬರೆದುಕೊಂಡಿದ್ದಾರೆ. ವೀಡಿಯೋವನ್ನೂ ಹಂಚಿಕೊಂಡಿದ್ದಾರೆ ಕೃಷ್ಣ ಬೈರೇಗೌಡರು.
PublicNext
22/10/2021 07:05 pm