ಹುಬ್ಬಳ್ಳಿ: ನನಗೆ ಹಾನಗಲ್ ಉಸ್ತುವಾರಿ ನೀಡಿದ್ದಾರೆ, ಆದ್ರೆ ನಾನು ಊರಲ್ಲಿ ಇರಲಿಲ್ಲ, ಹೀಗಾಗಿ ತಡವಾಗಿ ಬಂದಿದ್ದೇನೆ ಮಾಜಿ ಸಿಎಂ ಬಿಎಸ್ ವೈ ಜೊತೆ ಪ್ರಚಾರಕೈಗೊಳ್ಳುತ್ತೇವೆ, ವಾತಾವರಣ ಚನ್ನಾಗಿದೆ. ಹಾನಗಲ್ ನಲ್ಲಿ ನಾವೂ ನೂರಕ್ಕೆ ನೂರರಷ್ಟು ಮುನ್ನಡೆ ಇದೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲುತ್ತೆವೆ. ಗುಪ್ತಚರ ವರದಿ ಸಹ ಹಲವು ಭಾರಿ ಸುಳ್ಳು ಆಗಿದೆ. ನಾವೂ ಗೆಲ್ಲುತ್ತೇವೆ. ಸಾಧನೆ ಸಿದ್ದಾಂತಗಳ ಬಗ್ಗೆನೇ ಹೇಳಬೇಕು. ವ್ಯಯಕ್ತಿಕ ನಿಂದನೆ ಮಾಡಬಾರದು ಎಂದರು.
PublicNext
22/10/2021 11:03 am