ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯರಿಗೆ ಆರೋಪ ಮಾಡೋದು ಬಿಟ್ರೆ ಬೇರೇನೂ ಕೆಲಸ ಇಲ್ಲ: ಸವದಿ

ವಿಜಯಪುರ: ಬಿಜೆಪಿ ವೋಟಿಗೆ 2 ಸಾವಿರ ಹಂಚಿಕೆ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಸಿದ್ದರಾಮಯ್ಯರಿಗೆ ಆರೋಪ ಮಾಡೋದು ಬಿಟ್ಟು ಬೇರೇನು ಕೆಲಸ ಇಲ್ಲ ಎಂದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಆರೋಪ ಮಾಡೋದು ಬಿಟ್ರೆ ಬೇರೆ ಕೆಲಸವಿಲ್ಲ. ಕೇಂದ್ರದಿಂದ ಅನುದಾನ ತರಲು ಬಿಜೆಪಿ ರಾಜ್ಯ ನಾಯಕರಿಗೆ ಧಮ್ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಯಾರಿಗೆ ಧಮ್ ಇದೆ ಎಂದು ನವೆಂಬರ್ 2ರಂದು ಗೊತ್ತಾಗಲಿದೆ. ಈಗಾಗಲೇ ಉತ್ತರ ಕರ್ನಾಟಕದ ಜನರು 2018ರಲ್ಲಿ ಸಿದ್ದರಾಮಯ್ಯನವರಿಗೆ ಪಾಠ ಕಲಿಸಿದ್ದಾರೆ. ಆದರೂ ಅವರು ಪಾಠ ಕಲಿತಿಲ್ಲ. ಈ ಬಾರಿಯೂ ಮತ್ತೆ ಪಾಠ ಕಲಿಸಲಿದ್ದಾರೆ ಎದು ಲಕ್ಷ್ಮಣ ಸವದಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

21/10/2021 04:44 pm

Cinque Terre

78.45 K

Cinque Terre

4

ಸಂಬಂಧಿತ ಸುದ್ದಿ