ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯು.ಪಿನಲ್ಲಿ ಪ್ರಿಯಾಂಕಾ ಭರವಸೆ : ಹುಡುಗಿಯರಿಗೆ ಸ್ಕೂಟರ್, ಸ್ಮಾರ್ಟ್ ಫೋನ್

ದೆಹಲಿ: ಬರುವ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಟಿಕೆಟ್ ನೀಡುವ ಭರವಸೆ ನೀಡಿದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಂದು ಮಹತ್ವದ ಆಶ್ವಾಸನೆ ಕೊಟ್ಟಿದ್ದಾರೆ.ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 12ನೇ ತರಗತಿ ಪಾಸ್ ಆದ ಹುಡುಗಿಯರಿಗೆ ಸ್ಮಾರ್ಟ್ ಫೋನ್ ಮತ್ತು ಪದವೀಧರ ಯುವತಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ನಾನು ಉತ್ತರಪ್ರದೇಶದಲ್ಲಿ ಹಲವು ವಿದ್ಯಾರ್ಥಿಗಳನ್ನು ಭೇಟಿಯಾದೆ. ಅದರಲ್ಲಿ ಅನೇಕರು ತಮಗೆ ವಿದ್ಯಾಭ್ಯಾಸಕ್ಕೆ ಮತ್ತು ನಮ್ಮ ಸುರಕ್ಷತೆ ದೃಷ್ಟಿಯಿಂದಲೂ ಸ್ಮಾರ್ಟ್ ಫೋನ್ ಬೇಕು ಎಂದು ಕೇಳಿದ್ದಾರೆ.

ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಂಟರ್ಮೀಡಿಯಟ್ ಮುಗಿಸಿದ ಹುಡುಗಿಯರಿಗೆ ಸ್ಮಾರ್ಟ್ ಫೋನ್ ಮತ್ತು ಪದವಿ ಮುಗಿಸಿದ ಯುವತಿಯರಿಗೆ ಸ್ಕೂಟಿ ನೀಡಲಿದ್ದೇವೆ. ಇದಕ್ಕೆ ನಮ್ಮ ಪ್ರಣಾಳಿಕೆ ಸಮಿತಿ ಒಪ್ಪಿರುವುದು ತುಂಬ ಸಂತೋಷದ ಸಂಗತಿ ಎಂದಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ಮಹಿಳೆಯರಿಂದ ನವೆಂಬರ್ 15ರವರೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

21/10/2021 02:46 pm

Cinque Terre

67.76 K

Cinque Terre

14

ಸಂಬಂಧಿತ ಸುದ್ದಿ