ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಚಿವ ಸ್ಥಾನಕ್ಕೆ ನಾನು ಪ್ರಯತ್ನ ಮಾಡಲ್ಲ: ಅಸಮಾಧಾನ ಹೊರಹಾಕಿದ ರಾಜೂಗೌಡ

ಧಾರವಾಡ : ನಾನೇನು ಆಕಾಂಕ್ಷೆ ಅಲ್ಲಾ, ಕಳೆದ ಬಾರೀ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡಿದ್ದೆ ಆದರೆ ಸಿಗಲಿಲ್ಲ. ಮಂತ್ರಿ ಮಂಡಲ ರಚನೆ ಆಗುವಾಗ 29 ಸ್ಥಾನ ಇದ್ದವು ಆಗಲೇ ನನಗೆ ಸಚಿವ ಸ್ಥಾನ ಸಿಗಲಿಲ್ಲ. ಈಗ 4 ಸಚಿವ ಸ್ಥಾನ ಅಷ್ಟೇ ಇರೋದು ಇದರಲ್ಲಿ ನಾನು ಪ್ರಯತ್ನ ಮಾಡಿಯೂ ಫಲವಿಲ್ಲ. ಈಗಾಗಲೇ ನಮ್ಮ ಸಮಾಜದಲ್ಲಿ ಶ್ರೀರಾಮುಲು ಅವರಿಗೆ ಸ್ಥಾನ ಸಿಕ್ಕಿದೆ. ಈಗ ರಮೇಶ್ ಜಾರಕಿಹೊಳಿ ಅವರಿಗೂ ಸ್ಥಾನಮಾನ ನೀಡಬೇಕಾಗಿದೆ ಎಂದು ಶಾಸಕ ರಾಜೂಗೌಡ ಸಚಿವ ಸ್ಥಾನ ಧಕ್ಕದೆ ಇರುವದಕ್ಕೆ ಅಸಮಾಧಾನ ಹೊರಹಾಕಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕನಾಗಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವೇ ಗುರುತಿಸಿ ಸೂಕ್ತ ಸ್ಥಾನಮಾನ ನೀಡುತ್ತದೆ ಎಂಬ ಭರವಸೆ ಇದೆ. ಈಗ ಕೇವಲ ನಾಲ್ಕು ಮಂತ್ರಿ ಸ್ಥಾನಗಳು ಮಾತ್ರ ಇವೆ. ನಮ್ಮದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದರೆ ಈ ರೀತಿ ಆಗುತ್ತಿರಲಿಲ್ಲ. 105 ಸ್ಥಾನಕ್ಕೆ ಮಾತ್ರ ಬಿಜೆಪಿ ಪಕ್ಷ ಸೀಮಿತವಾಯಿತು. ಇನ್ನೂ ಸ್ವಲ್ಪ ಸೀಟುಗಳು ಬಂದಿದ್ದರೆ ಸಚಿವ ಸ್ಥಾನದ ನಿರೀಕ್ಷೆ ಮಾಡಬಹುದಿತ್ತು. ಆದರೆ ಸಧ್ಯ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಪಾತ್ರ ವಹಿಸಿದಂತಹ ಕೆಲವರಿಗೆ ಸಚಿವ ಸ್ಥಾನ ನೀಡಬೇಕಾಗಿದೆ. ಹಾಗಾಗಿ ನಾನು ಈ ಬಾರಿ ಸಚಿವ ಸ್ಥಾನಕ್ಕೆ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಇನ್ನೂ ಇದೆ ವೇಳೆ ಬಿಜೆಪಿಗರನ್ನು ನಿರ್ಲಕ್ಷಿಸಲಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ಪಕ್ಷ ಸಮ್ಮಿಶ್ರ ಸರ್ಕಾರ ಇದ್ದ ಹಾಗೆ ಇದೆ. ಕಾಂಗ್ರೆಸ್ ನಿಂದ 12, ಜೆಡಿಎಸ್ ನಿಂದ 3 ಜನ ಬಂದಿದ್ದಾರೆ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಾಗಿರುವದರಿಂದ ಮೂಲ ಬಿಜೆಪಿಗರಿಗೆ ಸ್ವಲ್ಪ ನಿರಾಸೆಯಾಗಿರಬಹುದು. ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ನಾವು ಮೊದಲ ಸಾಲಿನಲ್ಲಿಯೇ ಮಂತ್ರಿಗಳಾಗುತ್ತಿದ್ದೆವು ಎನ್ನುವ ಮೂಲಕ ಅಸಮಾಧಾನ ಹೋರಹಾಕಿದರು.

Edited By : Manjunath H D
PublicNext

PublicNext

20/10/2021 05:02 pm

Cinque Terre

41.24 K

Cinque Terre

0