ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇಮ್ಸ್ ಬಾಂಡ್ 007 ಮೀಮ್ ನಲ್ಲಿ ಮೋದಿ : “0 ಅಭಿವೃದ್ಧಿ, 0 ಆರ್ಥಿಕ ಬೆಳವಣಿಗೆ, 7 ವರ್ಷ ದುರಾಡಳಿತ

ದೆಹಲಿ: ಪ್ರಧಾನಿ ಮೋದಿ ಅಧಿಕಾರದಲ್ಲಿ ಏಳು ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರೆಕ್ ಒಬ್ರೈನ್ ಫೇಸ್ ಬುಕ್ ನಲ್ಲಿ ಮೀಮ್ ಶೇರ್ ಮಾಡಿದ್ದಾರೆ. ಅಚ್ಚರಿ ಅಂದ್ರೆ ಮೀಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು “ಬಾಂಡ್ ಪೋಸ್” ನಲ್ಲಿ ಚಿತ್ರಿಸಿದ್ದಾರೆ. “They call me 007” ಎಂದು ಶೀರ್ಷಿಕೆ ನೀಡಿದ್ದಾರೆ.

ಶೇರ್ ಆಗಿರುವ ಮೀಮ್ ನಲ್ಲಿ “0 ಅಭಿವೃದ್ಧಿ, 0 ಆರ್ಥಿಕ ಬೆಳವಣಿಗೆ, 7 ವರ್ಷಗಳ ಆರ್ಥಿಕ ದುರಾಡಳಿತ” ಎಂದು ಬರೆಯಲಾಗಿದೆ. ಚಲನಚಿತ್ರಗಳಲ್ಲಿ ಜೇಮ್ಸ್ ಬಾಂಡ್ “00” ಸಂಖ್ಯೆ ಹೊಂದಿದ್ದು “ಕೊಲ್ಲಲು ಪರವಾನಗಿ” ಇರುವ ಏಜೆಂಟ್ ಆಗಿದ್ದಾರೆ. ಆದಾಗ್ಯೂ ತೃಣಮೂಲದ ಕಾಂಗ್ರೆಸ್ ಆ ಸಂಖ್ಯೆಯನ್ನು “ಏಳು ವರ್ಷಗಳಲ್ಲಿ ಶೂನ್ಯ ಅಭಿವೃದ್ಧಿ ಮತ್ತು ಬೆಳವಣಿಗೆ” ಎಂದು ಹೇಳಿ ಪ್ರಧಾನಿ ಮೋದಿಯವರನ್ನು ಟೀಕಿಸಿದೆ.

Edited By : Nirmala Aralikatti
PublicNext

PublicNext

19/10/2021 07:32 pm

Cinque Terre

72.38 K

Cinque Terre

60

ಸಂಬಂಧಿತ ಸುದ್ದಿ